ಹುಬ್ಬಳ್ಳಿ –
ಡಾ ಗಣೇಶ ಶೇಟ್ ಅವರಿಗೆ 55ನೇ ಹುಟ್ಟು ಹಬ್ಬದ ಸಂಭ್ರಮ – ಹುಟ್ಟು ಹಬ್ಬಕ್ಕಾಗಿ ರಾಯಲ್ ರಿಟ್ಜ್ ಹೊಟೇಲ್ ನಲ್ಲಿ ನಡೆಯಲಿದೆ ಉಚಿತ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ…..ಕೆಜಿಪಿ ಫೌಂಡೇಶನ್ ನಿಂದ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ
ಕೆಜೆಪಿ ಗ್ರೂಪ್ ಆಫ್ ಫೌಂಡೇಶನ್ ಮತ್ತು ಕಂಪನೀಸ್ ಅಧ್ಯಕ್ಷರಾಗಿರುವ ಡಾ ಗಣೇಶ ಶೇಟ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ.55ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ರುವ ಖ್ಯಾತ ಉಧ್ಯಮಿ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಡಾ ಗಣೇಶ್ ಶೇಟ್ ಅವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣ ವಾಗಿ ಆಚರಿಸಲು ಕೆಜೆಪಿ ಗ್ರೂಪ್ ಫೌಂಡೇಶನ್ ಮುಂದಾಗಿದೆ.ಹುಟ್ಟು ಹಬ್ಬದ ಹಿನ್ನಲೆಯಲ್ಲಿ ನಗರದ ಅಮರಗೋಳದಲ್ಲಿರುವ ರಾಯಲ್ ರಿಟ್ಜ್ ಹೊಟೇಲ್ ನಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಫೌಂಡೇಶನ್ ಅಧ್ಯಕ್ಷರಾಗಿರುವ ಶ್ರೀಗಂಧ ಶೇಟ್ ಅವರು ಆಯೋಜನೆ ಮಾಡಿದ್ದು
ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರವು ನಡೆಯಲಿದೆ.ಕೆಜಿಪಿ ಫೌಂಡೇಶನ್ ನಿಂದ 55ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಹೊಟೇಲ್ ನಲ್ಲಿ ಹೊಟೇಲ್ ಸಿಬ್ಬಂದಿಗಳಿಗೆ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ.ಸಂಜೀವಿನಿ ಸ್ಪೇಷಾಲಿಟಿ ಮತ್ತು ಹಾರ್ಟ್ ಕೇರ್ ಸೆಂಟರ್ ಮತ್ತು ರಾಷ್ಟ್ರೋತ್ಥಾನ ರಕ್ತ ಕೇಂದ್ರ ವು ಕಾರ್ಯಕ್ರಮದಲ್ಲಿ ಆಗಮಿಸಲಿದ್ದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಒಂದು ಶಿಬಿರವು ನಡೆಯಲಿದ್ದು
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಶಿಬಿರದ ಲಾಭವನ್ನು ತಗೆದುಕೊಳ್ಳುವಂತೆ ಫೌಂಡೇಶನ್ ಅಧ್ಯಕ್ಷರಾಗಿರುವ ಶ್ರೀಗಂಧ ಶೇಟ್ ಅವರು ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……