ಧಾರವಾಡ –
ಪ್ರತೀ ವರ್ಷ ಮೇ ನಲ್ಲಿ ನಡೆಯಬೇಕಾದ ಶಿಕ್ಷಕರ ವರ್ಗಾವಣೆ ಹಲವಾರು ನಿಯಮಗಳ ಗೊಂದಲ ಹಾಗೂ ಕಾನೂನು ಸಮಸ್ಯೆಗಳ ಕಾರಣ ಎರಡು ಮೂರು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ನಡೆದಿರುವುದಿಲ್ಲ.ಈ ವರ್ಷ ಘನ ಸರ್ಕಾರ ಈಗಾಗ ಲೇ ವರ್ಗಾವಣೆ ಪ್ರಕ್ರಿಯೆಗೆ ಸಿದ್ದತೆ ನಡೆಸಲು ಸೂಚ ನೆ ನೀಡಿರುವುದು ಸಂತೋಷಕರವಾದ ವಿಷಯವಾ ಗಿದೆ.ಶಿಕ್ಷಣ ಇಲಾಖೆಯು ಕೂಡಲೇ ವರ್ಗಾವಣೆಯ ಸಂಬಂಧ ಯಾವುದೇ ಗೊಂದಲಗಳಿಗೆ ಎಡೆಮಾಡ ದೇ ಸೂಕ್ತ ವರ್ಗಾವಣೆ ಮಾರ್ಗಸೂಚಿ ಸಿದ್ದಪಡಿಸಿ
ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಬೇಕು ವರ್ಗಾವಣಾ ಮಾರ್ಗಸೂಚಿಯು ಪ್ರತಿ ಶಿಕ್ಷಕರ ಸ್ನೇಹಿಯಾಗಿರಬೇಕು ಎಂಬುದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾ ಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್. ಮುಳ್ಳೂರ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
೧) ಹಲವಾರು ವರ್ಷಗಳಿಂದ ಪ್ರಸ್ತುತ ಒಂದೇ ಶಾಲೆ ಯಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕ-ಶಿಕ್ಷಕಿಯರಿಗೆ ಮೊದಲ ಆದ್ಯತೆಯಲ್ಲಿ ಅವರ ಕೋರಿಕೆ ಮೇರೆಗೆ ವರ್ಗಾವಣೆ ಮಾಡಬೇಕು ಆಗಮಾತ್ರ ಇದುವರೆಗೂ ಒಮ್ಮೆಯೂ ವರ್ಗಾವಣೆ ಆಗಿಲ್ಲದ ಶಿಕ್ಷಕರುಗಳಿಗೆ ನ್ಯಾಯ ಸಿಗುವಂತಾಗುತ್ತದೆ.
೨) ಹೆಚ್ಚುವರಿ ಶಿಕ್ಷಕರ ಜೇಷ್ಟ ಪಟ್ಟಿ ತಯಾರಿಸುವಂ ತೆಯೇ ಶಿಕ್ಷಕರ ಪೂರ್ಣ ಸೇವಾವಧಿಯನ್ನು ಪರಿಗ ಣಿಸದೆಯೇ ಪ್ರಸ್ತುತ ಶಾಲೆಯಲ್ಲಿನ ಸೇವಾವಧಿ ಯನ್ನು ಮಾತ್ರ ಆಧರಿಸಿ ವರ್ಗಾವಣೆ ಸಂಬಂಧ ಜೇಷ್ಟತಾ ಪಟ್ಟಿ ತಯಾರಿಸಬೇಕು
೩) ತೀವ್ರತರ ಖಾಯಿಲೆ,ವಿಕಲಚೇತನ,ವಿಧವಾ ಶಿಕ್ಷಕಿಯರಿಗೆ, ಬೇರೆ ಬೇರೆ ಜಿಲ್ಲೆ/ವಲಯಗಳಲ್ಲಿ ಇರುವಂತ ದಂಪತಿ ಪ್ರಕರಣಗಳಿಗೆ ಹಿಂದಿನಿಂದಲೂ ಇದ್ದ ಹಾಗೆಯೇ ಜೇಷ್ಟತೆಯಲ್ಲಿ ಮೊದಲ ಆದ್ಯತೆ ಕಲ್ಪಿಸಬೇಕು
೪) ಪ್ರತೀ ತಾಲ್ಲೂಕಿನ ಖಾಲಿಹುದ್ದೆ ಶೇ.25% ಮಿತಿಯನ್ನು ರದ್ದುಪಡಿಸಬೇಕು.
೫) ಸೇವಾವಧಿಯಲ್ಲಿ ಒಮ್ಮೆಯಾದರೂ ಶಿಕ್ಷಕ-ಶಿಕ್ಷಕಿಯರುಗಳಿಗೆ ತಮ್ಮ ಸ್ವಂತ ಜಿಲ್ಲೆಗಳಿಗೆ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸಬೇಕು
೬) ಪರಸ್ಪರ ವರ್ಗಾವಣೆಗೆ ನಿಗದಿ ಪಡಿಸಿರುವ ಏಳು ವರ್ಷದ ಮಿತಿಯನ್ನು ಮೂರು ವರ್ಷಕ್ಕೆ ಇಳಿಸ ಬೇಕು,ಬೇರೆ ಯಾವ ಷರತ್ತುಗಳನ್ನು ವಿಧಿಸಬಾ ರದು.
೭) ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರುಗಳಿಗೆ ಇತರ ಭಾಗದ ಜಿಲ್ಲೆಗಳಿಗೆ ವರ್ಗಾವಣೆ ಹೊಂದಲು ಬಯಸಿದರೆ ಸುಲಭ ರೀತಿಯಲ್ಲಿ ಅವಕಾಶ ಕಲ್ಪಿಸಬೇಕು
ಆಗಮಾತ್ರ ಶಿಕ್ಷಕರುಗಳ ಸ್ನೇಹಿ ವರ್ಗಾವಣೆ ಸಾದ್ಯ ಎಂದು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಹೆಚ್ ರವರು ತಿಳಿಸಿದ್ದಾರೆ.