ಧಾರವಾಡ –
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಕರ್ನಾಟಕದ ಸರ್ಕಾರಿ ಮಹಿಳಾ ಶಿಕ್ಷಕಿಯರನ್ನು ಒಳಗೊಂಡ ರಾಜ್ಯದ ಏಕೈಕ ಮಹಿಳಾ ಶಿಕ್ಷಕಿಯರ ಸಂಘವಾಗಿದೆ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳನ್ನು ಪರಿಗಣಿಸಿದರೂ ಸಹಾ ಅತೀ ಹೆಚ್ಚು ನೌಕರರು ಮಹಿಳಾ ನೌಕರರೇ ಆಗಿದ್ದಾರೆ,ಅದರಲ್ಲೂ ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರೇ ಬಹುತೇಕ ಹೆಚ್ಚಿದ್ದು,ಪ್ರತಿಯೊಬ್ಬರೂ ಸಹಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಪಡೆದಿದ್ದಾರೆ ಅಲ್ಲದೇ ಪ್ರತೀವರ್ಷ ವಾರ್ಷಿಕ ವಂತಿಕೆ ಹಣವನ್ನು ಸಹಾ ನೌಕರರ ಸಂಘಕ್ಕೆ ನೀಡುತ್ತಾ ಬಂದಿರುತ್ತಾರೆ.ಅದಾಗ್ಯೂ ಬಹುಸಂ ಖ್ಯಾ ಮಹಿಳಾ ನೌಕರರಿರುವ ಹಾಗೂ ಧೀಮಂತ ಮಹಿಳೆ ದೇವಾಸಿಯಾರವರ ಶ್ರಮದಿಂದ ಬೆಳೆದು ಬಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸ್ಥಾಪನೆಗೊಂಡ ಅಂದಿನಿಂದ ಇದುವರೆವಿಗೂ ಸಹಾ ಮಹಿಳಾ ನೌಕರರಿಗೆ ಯಾವುದೇ ರೀತಿಯ ವಿಶೇಷ ಪ್ರಾತಿನಿಧ್ಯ,ಸ್ಥಾನಮಾನ ಸಿಗದೇ ಇರುವುದು ವಿಷಾದನೀಯವಾಗಿದೆ.ಇದುವರೆಗೂ ಬಂದು ಹೋದಂತ ಎಲ್ಲಾ ರಾಜ್ಯ ನೌಕರರ ಸಂಘದ ಅಧ್ಯಕ್ಷರುಗಳು ಸಹಾ ಇದರ ಬಗ್ಗೆ ಯಾವುದೇ ಗಮನ ಕೊಡದೇ ಮಹಿಳಾ ನೌಕರರನ್ನು ಕಡೆಗಣಿಸಿರುವುದು ವಿಪರ್ಯಾಸವಾಗಿದೆ.ಇಂದು ಎಲ್ಲಾ ನೌಕರರ ಆಶಾಕಿರಣ ವಾಗಿರುವ ಷಡಕ್ಷಾರಿ ಅವರು ಮೀಸಲಾತಿ ನೀಡುವಂತೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ. ಎಸ್.ಮುಳ್ಳೂರ ರವರು ಒತ್ತಾಯ ಮಾಡಿದ್ದಾರೆ.

ಹೌದು ಎಲ್ಲರ ಮನದಲ್ಲಿ ಹೆಸರು ಮಾಡಿರುವ ದಕ್ಷ, ಪ್ರಾಮಾಣಿಕ ಕಾರ್ಯಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಷಡಾಕ್ಷರಿರವರಿಗೆ ಇದರ ಸಂಬಂದ ರಾಜ್ಯಾದ್ಯಂತ ಈಗಾಗಲೇ ಪತ್ರ ಚಳುವಳಿ ಮಾಡಿ ಪ್ರತಿ ಜಿಲ್ಲೆ ತಾಲ್ಲೂಕುಗಳಿಂದ ಮನವಿ ಪತ್ರ ಕಳಿಸಿಕೊಟ್ಟು ಗಮನ ಸೆಳೆಯಲಾಗಿದೆ.ಇಂದು ಅವರೇ ಪ್ರಕಟ ಮಾಡಿರುವಂತೆ ಸಂಘದ ಬೈಲಾ ತಿದ್ದುಪಡಿ ಸಂಬಂಧ ದಿನಾಂಕ 20/02/ 2022 ರಂದು ಶಿವಮೊಗ್ಗದಲ್ಲಿ ಕರೆದಿರುವ ಸರ್ವಸದಸ್ಯರ ವಿಶೇಷ ಮಹಾಸಭೆ ಯಲ್ಲಿ ಕಡೆಗಣನೆಗೆ ಒಳಗಾಗಿರುವ ರಾಜ್ಯದ ಸಮಸ್ತ ಮಹಿಳಾ ನೌಕರರಿಗೆ ಸಾಂವಿಧಾನಿಕ ಸಮಾನತೆ ಪ್ರಾತಿನಿಧ್ಯ ದೊರಕಿಸಿಕೊಡುವ ಮೂಲಕ 50% ಮಹಿಳಾ ಮೀಸಲಾತಿ ಘೋಷಿಸಬೇಕು,ಇದು ಸಮಸ್ತ ಎಲ್ಲಾ ಮಹಿಳಾ ಶಿಕ್ಷಕಿಯರ,ನೌಕರರ ಬೇಡಿಕೆಯಾಗಿದ್ದು, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಒತ್ತಾಯ ಮಾಡಿದ್ದಾರೆ.