ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗೆ ಮಾಶಾಸನ ನೀಡದೆ ಅನ್ಯಾಯ ಡಾ ಸುರೇಶ್ ಕಮ್ಮಾರ ರಾಜ್ಯ ಸರ್ಕಾರ ದ ವಿರುದ್ಧ ಅಸಮಾಧಾನ…..

Suddi Sante Desk

ಧಾರವಾಡ –

ಮಾಶಾಸನ ಇಲ್ಲದೇ ಹಿರಿಯ ಕಲಾವಿದರ ಬದುಕು ಸಂಕಷ್ಟಕ್ಕೇ ಸಿಲುಕಿದೆ ಮೊದಲೇ ಕೋವಿಡ್ ಮಹಾಮಾರಿ ಯಿಂದ ತತ್ತರಿಸಿದ ಕಲಾವಿದರ ಪರಿಸ್ಥಿತಿ ಸಂಕಟ ಸಂಕಷ್ಟ ಹೇಳತೀರದಷ್ಟು ಕಾರ್ಯಕ್ರಮಗಳೂ ಇಲ್ಲ ಪರ್ಯಾಯ ವ್ಯವಸ್ಥೆಗಳೂ ಇಲ್ಲ ಇನ್ನು ಇಲಾಖೆಯಿಂದ ಯಾವುದೇ ಸಹಾಯಹಸ್ತವೂ ಇಲ್ಲ ಧವಸ ಧಾನ್ಯ ವಿತರಣೆಯೂ ಇಲ್ಲ ಎಂದು ರಾಜ್ಯ ಮಾನವ ಹಕ್ಕುಗಳ ಸಂರಕ್ಷಕರು ಹಾಗೂ ಲೈಫ್ ಟಚ್ ಫೌಂಡೇಶನ್ ಮುಖಂಡರಾದ ಡಾ ಸುರೇಶ ಕಮ್ಮಾರ ಹೇಳಿದ್ದಾರೆ.

ಇಂತಹ ಹೀನಾಯ ಪರಿಸ್ಥಿತಿಗಳ ನಡುವೆ ಹಿರಿಯ ಕಲಾವಿದರಿಗೆ ಕಳೆದ ಫೆಬ್ರವರಿ ಮಾರ್ಚ್ 2ತಿಂಗಳ ಮಾಶಾಸನವನ್ನೇ ಕೊಟ್ಟಿಲ್ಲ ಈಗ ಕಳೆದ 2 ತಿಂಗಳಿಂದ ಮಾಶಾಸನ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದಾರೆ, ಇನ್ನೂ ಅಧಿಕಾರಿಗಳ ಒಂದಕ್ಕೊಂದು ತಾಳೆಯಾಗದ ಉಡಾಪೆ ಉತ್ತರಗಳನ್ನು ನೀಡುತ್ತಿದ್ದು ಕಲಾವಿದರನ್ನು ಕಡೆಗಣಿಸುತ್ತ ನಿರ್ಲಕ್ಷಿಸುವ ಬೇಜವಾಬ್ದಾರಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಕಲಾವಿದರ ಕಣ್ಣೀರಿನ ಶಾಪ ಇವರಿಗೆ ತಟ್ಟುವುದಂತೂ ನಿಶ್ಚಿತ ನೊಂದ ಕಲಾವಿದರು ತಮ್ಮ ಅಳಲನ್ನು ದಿನವೂ ತೋಡಿಕೊಳ್ಳುತ್ತಿದ್ದಾರೆ ಕೊಡುತ್ತಿರುವ 2000 ಮಾಶಾಸನ ಇಂದಿನ ತುಟ್ಟಿ ದಿನಗಳಲ್ಲಿ ಯಾವುದ ಕ್ಕೂ ಸಾಲುತ್ತಿಲ್ಲ ಇನ್ನೂ ಹಲವಾರು ಕಲಾವಿದರು ಔಷಧಿ ಖರ್ಚುಗಳಿಗೂ ಸಾಲುತ್ತಿಲ್ಲ ಬದುಕು ದುಸ್ತರವಾಗುತ್ತಿದೆ ಎಂದರು

ಇನ್ಮೂ ಕಲಾವಿದರ ಕಷ್ಟ ಕಣ್ಣೀರು ಈ ದುಷ್ಟ ಸರಕಾರಕ್ಕೂ ಮಾನ ಮರ್ಯಾದೆ ಮನುಷ್ಯತ್ವವೇ ಇಲ್ಲದ ಅಧಿಕಾರಿಗಳ ಮತ್ತು ಸಿಬ್ಬಂದಿವರ್ಗಗಳ ದುರಾಡಳಿತ ಕ್ಕೂ ಕಾಣಿಸುತ್ತಿಲ್ಲ ಇದೆ ಅಧಿಕಾರಿಗಳು ಒಂದು ದಿನ ತಮ್ಮ ವೇತನ ಬರುವುದು ತಡವಾದರೆ ಬಾಯಿ ಬಡಕೊಳ್ಳುತ್ತಾರೆ ಆದರೆ 8-10 ತಿಂಗಳು ಹಿಂದಿನ ಮತ್ತು ಈಗ 2 ತಿಂಗಳು ಮಾಶಾಸನ ಬಿಡುಗಡೆ ಗೊಳಿಸದೇ ನಿರ್ಲಕ್ಷಿಸುವ ಇಲಾಖೆಯ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡುವುದು ಇನ್ನು ಅನಿವಾರ್ಯ ಎಂದು ನೊಂದ ಕಲಾವಿದರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.ಇನ್ನೂ ಈ ಮೊದಲು ಜಿಲ್ಲಾ ಖಜಾನೆಯಿಂದ ಪ್ರತಿ ತಿಂಗಳು 28, 29 ತಾರೀಖಿಗೆ ತಪ್ಪದೇ ಅಚ್ಚುಕಟ್ಟಾಗಿ ಪ್ರತಿಯೊಬ್ಬ ಕಲಾವಿದರ ಖಾತೆಗೆ ಮಾಶಾಸನ ಜಮೆ ಆಗುತ್ತಿತ್ತು ಆದರೆ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ ತೋರುತ್ತಿದ್ದಾರೆ ಎಂದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.