ಉಪ್ಪಿನ ಬೆಟಗೇರಿ –
ಮಹಾಮಾರಿ ಕರೋನಾದಿಂದಾಗಿ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ ಪರ್ಯಾಯ ವ್ಯವಸ್ಥೆ ಮಾಡಲು ಉಪ್ಪಿನಬೆಟಗೇರಿ ಮೂರುಸಾವಿ ರ ವಿರಕ್ತಮಠದ ಶ್ರೀ ಗುರು ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಓದುವ ಬೆಳಕು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಅಪ್ನಾದೇಶ ಬಳಗದ ಮಾಜಿ ಅಧ್ಯಕ್ಷರು ಗುರುಪುತ್ರಪ್ಪ ಶಿರೋಳ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಗೆ ನೀಡಿದ ನೂರಾರು ಪುಸ್ತಕಗಳನ್ನು ಮತ್ತು ಅಲ್ಮೇರ ಸೇರಿದಂತೆ ಗ್ರಂಥಾಲ ಯ ನಿರ್ಮಿಸಲು ನೀಡಿದ ದೇಣಿಗೆಯನ್ನು ಇನ್ನಿತರ ಸಾಮಗ್ರಿಗಳನ್ನು ಉಪ್ಪಿನಬೆಟಗೇರಿ ಶ್ರೀಮಠಕ್ಕೆ ವಿಶ್ವ ಪುಸ್ತಕ ದಿನದ ಅಂಗವಾಗಿ ಇಂದು ಹಸ್ತಾಂತರ ಮಾಡಲಾಯಿತು
ಇದೇ ಸಂದರ್ಭದಲ್ಲಿ ಶ್ರೀ ಗುರು ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಮಾತನಾಡಿ ರಾಜ್ಯದಲ್ಲಿ ಇದೊಂದು ಅತ್ಯುತ್ತಮ ಕಾರ್ಯವಾಗಿದೆ.ಕರೋನಾ ಕಾರಣಕ್ಕಾಗಿ ಮಕ್ಕಳ ಶಿಕ್ಷಣ ಕುಂಠಿತವಾಯಿತು ಅದನ್ನು ತಪ್ಪಿಸಲು ಈ ಗ್ರಂಥಾಲಯದ ಮೂಲಕ ಅಕ್ಷರದ ಬೆಳಕು ಮೂಡ ಲು ಓದುವ ಬೆಳಕು ಕಾರ್ಯಕ್ರಮ ಆರಂಭಿಸಲಾ ಯಿತು ಎಲ್ಲಾ ಮಕ್ಕಳು ಕಾಲೇಜು ವಿದ್ಯಾರ್ಥಿಗಳಿಗೆ ಈ ಗ್ರಂಥಾಲಯ ಸದು ಪಯೋಗ ಆಗಲಿ ಓದು ನಿಲ್ಲಬಾರದು ಅದು ಮುಂದುವರೆಯಲಿ ಎಂದು ತಿಳಿಸಿದರು
ಗೌರವಾದ್ಯಕ್ಷರು ಭೀಮಪ್ಪ ಕಾಸಾಯಿ ಮಾತನಾಡಿ ಕರೋನಾ ಮಹಾಮಾರಿಯಿಂದ ಜನಜೀವನ ಅಸ್ತ ವ್ಯಸ್ತತೆ ಆಗಿದೆ ಆ ರೋಗದಿಂದ ಮುಕ್ತಿ ಪಡೆಯಲು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ ಸ್ಯಾನಿಟೈಜರ್ ಉಪಯೋಗಿಸಲು ಕರೆ ನೀಡಿದರು ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾದ್ಯಕ್ಷರು ಭೀಮಪ್ಪ ಕಾಸಾಯಿ ಅಧ್ಯಕ್ಷರು ಎಲ್ ಐ ಲಕ್ಕಮ್ಮನವರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ತಿಗಡಿ ರುದ್ರೇಶ ಕುರ್ಲಿ ರಾಜೂ ಬೆಟಗೇರಿ ಎಂ ಐ ದೀವಟಗಿ, ಪ್ರಕಾಶ ಹೂಗಾರ ಚನಬಸಪ್ಪ ಲಗಮಣ್ಣವರ ಕ್ರಷ್ಣ ಬುದ್ನಿ ಮುಂತಾದ ವರು ಹಾಜರಿದ್ದರು.