ಹುಬ್ಬಳ್ಳಿ –
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಡ್ರಗ್ಸ್ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಸಿಸಿಬಿ ಪೊಲೀಸ ರು ಕಾರ್ಯಾಚರಣೆ ಮಾಡಿ ಪೆಡ್ಲರ್ ಸೇರಿದಂತೆ ಇಬ್ಬರನ್ನು ವಶಕ್ಕೆ ತಗೆದುಕೊಂಡು ಅಪಾರ ಪ್ರಮಾ ಣದಲ್ಲಿ ಡ್ರಗ್ಸ್ ನ್ನು ದಾಳಿಯಲ್ಲಿ ವಶಪಡಿಸಿಕೊಂಡಿ ದ್ದಾರೆ.
ಪೆಡ್ಲರ್ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧನ ಮಾಡಿ ತನಿಖೆ ಮಾಡ್ತಾ ಇದ್ದಾರೆ. ಹುಬ್ಬಳ್ಳಿ ಯ ಗೋಕುಲ್ ರಸ್ತೆಯ ವಿಮಾನ ನಿಲ್ದಾಣ ಬಳಿ ಇಬ್ಬರನ್ನು ಬಂಧನ ಮಾಡಲಾಗಿದೆ.ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿದ್ದು ಅಜಯರಾಮ್ ವೆಂಕಟೇಶ್ ರಾವ್ ಮತ್ತು ಶಿಮ್ರಾನ್ ಜಿತ್ ಕೌರ್ ಎಂಬ ಇಬ್ಬರನ್ನು ಬಂಧನ ಮಾಡಿದ್ದಾರೆ.
ಅಜಯ್ ರಾವ್ ಮುಂಬಯಿಯ ಅಂದೇರಿ ನಿವಾಸಿಯಾಗಿದ್ದು ಪೆಡ್ಲರ್ ಆಗಿದ್ದು ಇವನಿಂದ ತಗೆದುಕೊಳ್ಳುತ್ತಿದ್ದ ಹುಬ್ಬಳ್ಳಿಯ ಶಿಮ್ರಾನ್ ಜಿತ್ ಕೌರ್ ಇವರನ್ನು ಬಂಧನ ಮಾಡಲಾಗಿದೆ.
ಇವರು ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೇಲ್ ಉದ್ಯಮಿಯ ಪುತ್ರಿಯಾಗಿದ್ದು ಪೆಡ್ಲರ್ ನಿಂದ ತಗೆದುಕೊಳ್ಳುವಾಗ ರೇಡ್ ಹ್ಯಾಂಡ್ ಹಿಡಿದಿದ್ದಾರೆ ಸಿಸಿಬಿ ಪೊಲೀಸರು.ಇಬ್ಬರನ್ನು ವಶಕ್ಕೆ ತೆಗೆದು ಕೊಂಡು ಹೆಚ್ಚಿನ ವಿಚಾರಣೆಯನ್ನು ಸಿಸಿಬಿ ಪೊಲೀಸರು ಮಾಡತಾ ಇದ್ದಾರೆ.
ಇನ್ನೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದ್ದು ಇನ್ಸ್ಪೆಕ್ಟರ್ ಅಧಿಕಾರಿಗಳಾದ ಅಲ್ತಾಫ್ ಮುಲ್ಲಾ, ಭರತ ರೆಡ್ಡಿ, ಸಿಬ್ಬಂದಿ ಗಳಾದ ಶಿವು ಕೆಂಪೊಡಿ,ದಯಾನಂದ ಗುಂಡಗೈಯಿ,ಎನ್ ಎಸ್ ಬೊಗೂರ,ಅನಿಲ ಹುಗ್ಗಿ, ರಾಜು ಬಿಚ್ಚಂಡರ ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು