ಹುಬ್ಬಳ್ಳಿ –
ಹುಬ್ಬಳ್ಳಿ-ಧಾರವಾಡ ಕಿಲ್ಲರ್ ಹೆದ್ದಾರಿಗೆ ಕೊನೆಗೂ ಮುಹೂರ್ತ ಫೀಕ್ಸ್ ಆಗಿದೆ ಹೌದು ಫೆಬ್ರುವರಿ 28 ರಂದು ಹೆದ್ದಾರಿ ವಿಸ್ತರಣೆ ಗೆ ಪೂಜಾ ಕಾರ್ಯಕ್ರಮ ನಡೆಯಲಿದ್ದು ಹುಬ್ಬಳ್ಳಿ ಧಾರವಾಡ ನಡುವಿನ 30.6 ಕಿ.ಮೀ ಬೈಪಾಸ್ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಫೆಬ್ರುವರಿ 28 ರಂದು ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕಾಮಗಾರಿ ಗೆ ಭೂಮಿ ಪೂಜೆ ಮಾಡಲಿದ್ದಾರೆ

ಹುಬ್ಬಳ್ಳಿಯ ಹೊರವಲಯದ ಗಬ್ಬೂರು ಬೈಪಾಸ್ ಬಳಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಮನದು ರಾಜ್ಯ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನ ಕಾಯಿ ಹೇಳಿದರು.
ಗಡ್ಕರಿ ಅವರು ಒಂದು ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಏಳು ಕಾಮಗಾರಿಗಳನ್ನುಉದ್ಘಾಟನೆ ಮಾಡಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ,ಶಾಸಕ ಜಗದೀಶ ಶೆಟ್ಟರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದರು


ಇನ್ನೂ ಹುಬ್ಬಳ್ಳಿ-ಹಾವೇರಿ ನಡುವೆ 63.4 ಕಿ.ಮೀ. ಷಟ್ಪಥ ರಸ್ತೆ (₹2,821.19 ಕೋಟಿ), ಹುಬ್ಬಳ್ಳಿ-ಹೊಸಪೇಟೆ ನಡುವಿನ 143 ಕಿ.ಮೀ.ಚತುಷ್ಪಥ ರಸ್ತೆ (₹2,722.26 ಕೋಟಿ), ರಾಷ್ಟ್ರೀಯ ಹೆದ್ದಾರಿ 218 ಮತ್ತು 63 ರಿಂದ ಹುಬ್ಬಳ್ಳಿ ನಗರಕ್ಕೆ ಸಂಪರ್ಕ ಕಲ್ಪಿಸುವ 3.8 ಕಿ.ಮೀ. ಉದ್ದದ ರಸ್ತೆ (₹113.77 ಕೋಟಿ), ಬಂಕಾಪುರ ಚೌಕ್ ದಿಂದ ರಾಣಿ ಚನ್ನಮ್ಮ ವೃತ್ತಕ್ಕೆ ಸಂಪರ್ಕ ಕಲ್ಪಿಸುವ 2.5 ಕಿ.ಮೀ. (₹39.09 ಕೋಟಿ) ರಸ್ತೆ, ವಿಜಯಪುರ-ಹುಬ್ಬಳ್ಳಿ ನಡುವೆ ಸಂಪರ್ಕ ಕಲ್ಪಿಸುವ 47 ಕಿ.ಮೀ. ಹೆದ್ದಾರಿ
(₹165.67 ಕೋಟಿ), ಕಲಘಟಗಿ ಪಟ್ಟಣ ವ್ಯಾಪ್ತಿಯಲ್ಲಿ ದ್ವಿಪಥದಿಂದ ಚತುಷ್ಪಥವಾಗಿ ಅಭಿವೃದ್ಧಿ ಹೊಂದಿದ ಅಂಕೋಲಾ ಗೂಟಿ ವಿಭಾಗದ 4 ಕಿ.ಮೀ. ರಸ್ತೆ (₹50.23 ಕೋಟಿ) ಮತ್ತು ಧಾರವಾಡದ ಜುಬ್ಲಿ ವೃತ್ತದಿಂದ ನರೇಂದ್ರ ಬೈಪಾಸ್‌ಗೆ ಸಂಪರ್ಕಿಸುವ 5.62 ಕಿ.ಮೀ. (₹71.09) ರಸ್ತೆಗಳನ್ನು ಗಡ್ಕರಿ ಲೋಕಾರ್ಪಣೆ ಮಾಡಲಿದ್ದಾರೆ.
ಕ್ಯಾಮೆರಾ ಪರಶುರಾಮ ಗೌಡರ ಜೊತೆ ಮಂಜು ಸರ್ವಿ ಸುದ್ದಿ ಸಂತೆ ನ್ಯೂಸ್ ಧಾರವಾಡ.