ಧಾರವಾಡ –
ಮಳೆಗಾಲದಲ್ಲಿ ಮತ್ತು ಕೆನಾಲ್ ನಿಂದ ಪೊಲಾಗುತ್ತಿರುವ ನೀರನ್ನು ಬೇರೆ ಕಡೆ ಶಿಪ್ಟ್ ಮಾಡುವ ಉದ್ದೇಶದಿಂದ ಪೈಪ್ ಲೈನ್ ಹಾಕಿ ಕಾಮಗಾರಿಯನ್ನು ಮಾಡಲಾಗುತ್ತಿದೆ.
ಧಾರವಾಡ ಜಿಲ್ಲೆಯ ನವಲಗುಂದ ನಾವಳ್ಳಿ ಕ್ರಾಸ್ ಬಳಿ ಕಲ್ಲವೊಡ್ಡ ಪೂಲ್ ಕಾಮಗಾರಿಯನ್ನು ಮಾಡಲಾಗುತ್ತಿದೆ.
ಈ ಒಂದು ಕಾಮಗಾರಿಯಲ್ಲಿ ಮುಖ್ಯವಾಗಿ ನಾಲ್ಕು ಪೂಟ್ ಪೈಪ್ ಗಳನ್ನು ಭೂಮಿಯಲ್ಲಿ ಹಾಕಿ ಅದರ ಮೂಲಕ 150 ಜಮೀನುಗಳಿಗೆ ಮಳೆಗಾಲದಲ್ಲಿ ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ಮತ್ತು ಕಾಲುವೆಯ ಅಕ್ಕ ಪಕ್ಕದಲ್ಲಿ ನಿಂತುಕೊಳ್ಳುತ್ತಿದ್ದ ನೀರನ್ನು ಬೇರೆ ಕಡೆ ಶಿಪ್ಟ್ ಮಾಡುವ ಉದ್ದೇಶದಿಂದ ಈ ಒಂದು ಕಾಮಗಾರಿಯನ್ನು ಮಾಡಲಾಗುತ್ತಿದೆ.
ರೈತರಿಗೆ ಸಮಸ್ಯೆಯಾಗುತ್ತಿದೆ ಸರಿಯಾದ ವಿಚಾರ ಆದರೆ ಒಂದಿಷ್ಟು ರೈತರಿಗೆ ಹೀಗೆ ಕಾಮಗಾರಿ ಮಾಡಿ ಮತ್ತೊಂದಿಷ್ಟು ರೈತರನ್ನು ಬೀದಿಪಾಲು ಮಾಡಲಾಗುತ್ತಿದೆ.
ಹೀಗೆ ಕಾಮಗಾರಿ ಬದಲಿಗೆ ಅಲ್ಲೇ ಪಕ್ಕದಲ್ಲಿಯೇ ಸಾಸವಿ ಹಳ್ಳವಿದ್ದು ಅದಕ್ಕೆ ಕೂಡಿಸಿದರೆ ಯಾವುದೇ ಸಮಸ್ಯೆ ತೊಂದರೆಯಾಗುತ್ತಿರಲಿಲ್ಲ ಆದರೆ ಹೀಗೆ ಮೇಲಿನ 150 ಎಕರೆ ಜಮೀನಿನ ಸಮಸ್ಯೆಯನ್ನು ಪರಿಹಾರ ಮಾಡಲು ಈಗ 215 ರೈತ ಕುಟುಂಬ ಗಳನ್ನು ಬೀದಿ ಪಾಲು ಮಾಡುಲಾಗುತ್ತಿದೆ.
ಈ ಕುರಿತಂತೆ ನೊಂದಕೊಂಡಿರುವ ನಾವಳ್ಳಿ. ತುಪ್ಪದ ಕುರಹಟ್ಟಿ,ಶಲವಡಿ ಗ್ರಾಮಗಳ 16 ರೈತ ಕುಟುಂಬದವರು ಕಳೆದ ಒಂದು ವಾರದಿಂದ ಬಿಡುವಿಲ್ಲದೇ ಹೋರಾಟವನ್ನು ಮಾಡುತ್ತಿದ್ದು ಈ ಕುರಿತಂತೆ ದೂರು ನೀಡಿದರು ಕೂಡಾ ಯಾರು ಸ್ಪಂದಿಸುತ್ತಿಲ್ಲ.
ನಿನ್ನೇಯಿಂದ ನೊಂದಕೊಂಡಿರುವ ರೈತ ಕುಟುಂಬಗಳೊಂದಿಗೆ ಧಾರವಾಡ ಜಿಲ್ಲಾ ಸಮತಾ ಸೇನಿಕ ದಳ ಹೋರಾಟಕ್ಕಿಳಿದಿದ್ದು ಯೊಗೀಶ್ ಚಲವಾದಿ ನೇತ್ರತ್ವದಲ್ಲಿ ರೈತರಿಗೆ ಬೆಂಬಲವನ್ನು ನೀಡಿದ್ದು
ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ ಎಂದು ಸ್ಥಳದಲ್ಲಿಯೇ ರೈತರು ಕೈಯಲ್ಲಿ ವಿಷದ ಬಾಟಲ್ ಹಿಡಿದುಕೊಂಡು ಸಂಘಟನೆಯೊಂದಿಗೆ ಹೋರಾಟ ಮಾಡುತ್ತಿದ್ದಾರೆ. ಇನ್ನೂ ಈ ಕುರಿತಂತೆ ನವಲಗುಂದ ಶಾಸಕರು ಹೇಳಿದರು ಕೂಡಾ ಸ್ಪಂದಿಸಿಲ್ಲವಂತೆ.