ಹುಬ್ಬಳ್ಳಿ –
ಇನಸ್ಪೇಕ್ಟರ್ ಎನ್ ಪಿ ಕಾಡದೇವರಮಠ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಆಗಿ ವರ್ಗಾವಣೆಯಾಗಿದ್ದಾರೆ.2007 ರ ಬ್ಯಾಚ್ ಇವರನ್ನು ರಾಜ್ಯ ಸರ್ಕಾರ OOD ಮೇಲೆ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ.

ಇತ್ತ ವರ್ಗಾವಣೆ ಆದೇಶ ಬರುತ್ತಿದ್ದಂತೆ ಎನ್ ಪಿ ಕಾಡದೇವರಮಠ ಠಾಣೆಯಲ್ಲಿ ಅಧಿಕಾರವನ್ನು ಸ್ವೀಕಾರ ಮಾಡಿದರು.ಈ ಹಿಂದೆ ಠಾಣೆಯಲ್ಲಿ ಕರ್ತವ್ಯದ ಮೇಲಿದ್ದ ಪ್ರಶಾಂತ ನಾಯಕ ವರ್ಗಾವಣೆಯಾದ ನಂತರ ಎರಡೂವರೆ ತಿಂಗಳ ಕಾಲ ಅನಾಥವಾಗಿದ್ದ ಪೂರ್ವ ಸಂಚಾರಿ ಠಾಣೆಯ ಜವಾಬ್ದಾರಿಯನ್ನು ಶರಣ ದೇಸಾಯಿ ನಿಭಾಯಿಸಿದ್ದರು.

ತಾತ್ಕಾಲಿಕವಾಗಿ ವರ್ಗಾವಣೆಗೊಂಡ ಇನಸ್ಪೇಕ್ಟರ್ ಎನ್ ಪಿ ಕಾಡದೇವರಮಠ ಅವರಿಗೆ ಇಂದು ಪಿಎಸೈ ಶರಣ ದೇಸಾಯಿ ಕಚೇರಿಗೆ ಬರಮಾಡಿಕೊಂಡು ಸ್ವಾಗತಿಸಿದ್ರು. ಹಾಗೇ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಮಸ್ತ ಸಿಬ್ಬಂದ್ದಿಗಳು ಕೂಡಾ ನೂತನ ಚಾರ್ಲಿ ಸಾಹೇಬರನ್ನು ಕಚೇರಿಗೆ ಸ್ವಾಗತಿಸಿಕೊಂಡರು.