ಹುಬ್ಬಳ್ಳಿ –
ಸಧ್ಯ ಸಾರಿಗೆ ನೌಕರರ ಪ್ರತಿಭಟನೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಸ್ ಸಂಚಾರ ಸಂಪೂರ್ಣವಾಗಿ ಬಂದ್ ಇದೆ. ಆದರೂ ಕೂಡಾ ಹಾಜರಾತಿ ಕಡ್ಡಾಯ ಹಿನ್ನಲೆಯಲ್ಲಿ ಶಿಕ್ಷಕರು ಶಾಲೆಗಳಿಗೆ ಮಕ್ಕಳು ಬಾರ ದಿದ್ದರೂ ಕೂಡಾ ತಪ್ಪದೆ ಶಾಲೆಗಳಿಗೆ ಹೋಗಲೆ ಬೇಕು. ಬಸ್ ಇಲ್ಲವೆಂದರೂ ಶಿಕ್ಷಕರು ಹೇಗೆ ಹೋಗ ಬೇಕು ಎನ್ನುವ ಪರಿಜ್ಞಾನ ಇಲ್ಲದೇ ನಮ್ಮ ಶಿಕ್ಷಣ ಇಲಾಖೆ ಇದೆ. ಆದರೂ ಕರ್ತವ್ಯವೇ ದೇವರು ಎಂದು lಕೊಂಡ ಶಿಕ್ಷಕರು ತಪ್ಪದೇ ಶಾಲೆಗಳಿಗೆ ಹೋಗತಾ ಇದ್ದಾರೆ. ಹೇಗೆ ಹೋಗತಾರೆ ಎನ್ನೊದಕ್ಕೆ ಈ ಒಂದು ದೃಶ್ಯವೇ ಸಾಕ್ಷಿ
ಹೌದು ಹುಬ್ಬಳ್ಳಿಯಲ್ಲಿ ಶಿಕ್ಷಕಿ ಯೊಬ್ಬರು ಲಾರಿಯಲ್ಲಿ ಶಾಲೆಗೆ ಹೋಗತಾ ಇದ್ದಾರೆ. ಸಾಮಾನ್ಯವಾಗಿ ಬಸ್ ಟೆಂಪೊ ಇಲ್ಲವೆ ಇತರೆ ಯಾವುದಾದರೂ ವಾಹನ ಇದ್ದರೆ ಪರವಾಗಿಲ್ಲ ಆದರೆ ಈ ಒಂದು ಚಿತ್ರಣ ನೋಡಿದರೆ ನಿಜವಾಗಿಯೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದಾರೆ ಶಿಕ್ಷಕಿಯರು ಲಾರಿಯಲ್ಲಿ ಹೇಗೆ ಹತ್ತಬೇಕು ಇಕ್ಕಟ್ಟಾದ ಜಾಗದಲ್ಲಿ ಹೇಗೆ ಕುಳಿತುಕೊಂಡು ಹೋಗಬೇಕು ಇಂಥಹ ಹಲವಾರು ಪ್ರಶ್ನೆಗಳಿಗೆ ಶಿಕ್ಷಣ ಇಲಾಖೆಯವರೇ ಉತ್ತರಿಸಬೇಕು ಇನ್ನೂ ಇಂಥಹ ಚಿತ್ರಣವನ್ನು ನೋಡಿ ನೋಡಲಾರದಂತೆ ಇದ್ದಾರೆ ರಾಜ್ಯ ಸಂಘಟನೆ ಮುಖಂಡರು