ಕೋಲ್ಕತ್ತಾ –
ರಾಜಕೀಯ ವ್ಯಕ್ತಿಗಳು ಏನೇ ಮಾಡಿದರೂ ನಡೆಯುತ್ತೆ ಎಂಬ ಕಾಲ ಹಿಂದೊಮ್ಮೆ ಇತ್ತಯ ಆದರೆ ಈಗ ಕಾಲ ಬದಲಾಗಿದ್ದು ಅದು ಈಗಿಲ್ಲ.ಹೀಗಾಗಿ ಯಾರೂ ಏನೇ ಮಾಡಿದರೂ ತಪ್ಪು ಕ್ಷಣ ಮಾತ್ರದಲ್ಲಿ ಬೆಳಕಿಗೆ ಬಂದುಬಿಡು ತ್ತದೆ.ಹೌದು ಇದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ಕರ್ನಾಟಕದಲ್ಲಿ ಬೆಳಕಿಗೆ ಬಂದ ಪಿಎಸ್ಐ ಹಗರಣ.ಇದರ ಬೆನ್ನಲ್ಲೇ ಇಂತಹದ್ದೇ ಹಗರಣವೊಂದು ಪಶ್ಚಿಮ ಬಂಗಾಳ ದಲ್ಲಿ ಬಯಲಾಗಿದ್ದುಆದರೆ ಇದು ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಹಗರಣವಾಗಿದೆ.ಸರ್ಕಾರಿ ಕೆಲಸ ಅರ್ಹತೆಗನು ಗುಣವಾಗಿ ಪಡೆದುಕೊಳ್ಳಬೇಕೆ ಹೊರತು ಅಡ್ಡದಾರಿಯಿಂ ದಲ್ಲ ಎಂಬುದಕ್ಕೆ ಮತ್ತೊಂದು ಪ್ರಕರಣ ನಿದರ್ಶನವಾಗಿದೆ.
ಹೌದು ಪಶ್ಚಿಮ ಬಂಗಾಳದ ಸಚಿವರೊಬ್ಬರು ತನ್ನ ಮಗಳಿಗೆ ಸರ್ಕಾರಿ ಕೆಲಸ ಕೊಡಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಶಿಕ್ಷಣ ಸಚಿವ ಪರೇಶ್ ಅಧಿಕೇರಿ ಎಂಬುವರು ತನ್ನ ಪುತ್ರಿ ಅಂಕಿತಾ ಅಧಿಕೇರಿ ಅವರಿಗೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಯಾಗಿ ನೇಮಕ ಮಾಡಿದ್ದಾರೆ.ಆಕೆ ಶಿಕ್ಷಕಿಯಾಗಿ ಕಾರ್ಯ ಕೂಡ ನಿರ್ವಹಿಸಿದ್ದಳು.ಇದ್ದಕ್ಕಿದ್ದಂತೆ ಈಕೆ ನೇಮಕಾತಿ ಕುರಿತ ಆರೋಪಗಳು ಕೇಳಿಬಂದಿದ್ದವು.ಶಿಕ್ಷಕರ ನೇಮಕಾ ತಿಗೆ ಬರೆದ ಪ್ರವೇಶ ಪರೀಕ್ಷೆಯಲ್ಲಿ ಈಕೆಗಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿ ಇದನ್ನು ಪ್ರಶ್ನಿಸಿ ಕೋಲ್ಕತ್ತಾ ಹೈ ಕೋರ್ಟ್ ಮೆಟ್ಟಿಲೇರಿದ್ದರು.ಪ್ರಕರಣ ಕುರಿತು ತನಿಖೆಗೆ ನ್ಯಾಯಾ ಲಯ ಆದೇಶಿಸಿತ್ತು ತನಿಖೆಯಲ್ಲಿ ಸತ್ಯಾಂಶ ಬಯಲಾಗಿದೆ.
ಇತರೆ ಅಭ್ಯರ್ಥಿಗಳಿಗೆ ತನ್ನ ಪುತ್ರಿಗಿಂತಲೂ ಹೆಚ್ಚು ಅಂಕ ಬಂದಿದ್ದರೂ ಅವರನ್ನು ಆಯ್ಕೆ ಮಾಡದಿರುವುದಕ್ಕೆ ಸಚಿವ ರನ್ನು ಪ್ರಶ್ನಿಸಲಾಗಿದೆ.ಇನ್ನು ಈಕೆಯನ್ನು ಕೆಲಸದಿಂದ ವಜಾ ಮಾಡಿರುವ ನ್ಯಾಯಾಲಯ 41 ತಿಂಗಳುಗಳ ಕಾಲ ಕೆಲಸ ನಿರ್ವಹಿಸಿರುವ ಈಕೆಯ ಸಂಬಳವನ್ನೂ ಹಿಂಪಡೆಯು ವಂತೆ ಆದೇಶಿಸಲಾಗಿದೆ.ಸದ್ಯ ಪ್ರಕರಣ ಸಂಬಂಧ ಮೂರು ದಿನಗಳಿಂದ ಸಚಿವನನ್ನು ಸಿಬಿಐ ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕುತ್ತಿದೆ.