ಭೋಪಾಲ್ –
ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್ ಸಿಂಗ್ ಪಾರ್ಮರ್ ಸೊಸೆ ಆತ್ಮಹತ್ಯೆಗೆ ಶರಣಾಗಿರುವುದು ಭಾರೀ ಅನುಮಾ ನಕ್ಕೆ ಎಡೆಮಾಡಿಕೊಟ್ಟಿದೆ.23 ವರ್ಷದ ಸವಿತಾ ಪಾರ್ಮರ್ ಶಜಾಪುರದಲ್ಲಿರುವ ಸಚಿವರ ಪೂರ್ವಜರ ಮನೆಯಲ್ಲಿ ಮೇ 11ರಂದು ನೇಣಿಗೆ ಶರಣಾಗಿದ್ದಾರೆ.ಸವಿತಾ ಸಚಿವರ ಪುತ್ರ ದೇವರಾಜ್ ಪಾರ್ಮರ್ ಎಂಬುವರನ್ನು ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದರು.

ಕೌಟುಂಬಿಕ ಸಮಸ್ಯೆಯಿಂದಲೇ ಸವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಹೇಳಲಾಗಿದ್ದರೂ ಕೂಡಾ ಪೊಲೀಸರಿಂದ ಯಾವುದೇ ಮಾಹಿತಿ ಖಚಿತವಾಗಿಲ್ಲ. ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ ಪೊಲೀಸರು.





















