ಹುಬ್ಬಳ್ಳಿ ಧಾರವಾಡ – ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ಸಾರಿಗೆ ನೌಕರರ ಹೋರಾಟ ಮುಂದುವರೆದಿದೆ.ಎರಡು ದಿನಗಳಿಂದ ರಾಜ್ಯವ್ಯಾಪಿ ಸಾರಿಗೆ ನೌಕರರು ಹೋರಾಟವನ್ನು ಮಾಡ್ತಾ ಇದ್ದಾರೆ. ದಿನದಿಂದ ದಿನಕ್ಕೇ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು ಇವೆಲ್ಲದರ ನಡುವೆ ಇಲಾಖೆಯ ಅಧಿಕಾರಿಗಳು ಹೇಗಾದರೂ ಮಾಡಿ ಬಸ್ ಆರಂಭ ಮಾಡಬೇಕು. ಬಸ್ ಗಳಿಲ್ಲದೇ ಪರದಾಡುತ್ತಿರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತೆರೆ ಮರೆಯಲ್ಲಿ ಏನೇಲ್ಲಾ ಮಾಡುತ್ತಿದ್ದಾರೆ.

ಆದ್ರೂ ಯಾವುದು ಸಾಧ್ಯವಾಗುತ್ತಿಲ್ಲ. ಇನ್ನೂ ಪೊಲೀಸರ ಮೂಲಕ ಬಂಧನ ಮಾಡುವ ಪ್ಲಾನ್ ಮಾಡಿಸಿ ಅದು ಸಾಧ್ಯವಾಗದಿದ್ದಾಗ ಹುಬ್ಬಳ್ಳಿ ಧಾರವಾಡದಲ್ಲಿ ರಾತ್ರೊ ರಾತ್ರಿ ಸಾರಿಗೆ ಅಧಿಕಾರಿಗಳು ಮತ್ತೊಂದು ಪ್ರಯತ್ನವನ್ನು ಮಾಡಿದ್ರು.

ಹೌದು ಅವಳಿ ನಗರದ ಬಸ್ ನಿಲ್ದಾಣದಲ್ಲಿ ಎಲ್ಲೇಂದರಲ್ಲಿ ನಿಂತುಕೊಂಡಿರುವ ಬಸ್ ಗಳನ್ನು ಹೇಗಾದರೂ ಮಾಡಿ ಡಿಪೋ ಗಳಿಗೆ ಸೇರಿಸಿ ಬಸ್ ನಿಲ್ದಾಣಗಳನ್ನು ಖಾಲಿ ಮಾಡಿಸಿ ಖಾಸಗಿ ವಾಹನಗಳನ್ನು ಓಡಿಸಲು ಅಧಿಕಾರಿಗಳು ಯೋಜನೆ ಹಾಕಿಕೊಂಡು ನಿಲ್ದಾಣಗಳಲ್ಲಿ ಇದ್ದ ನೌಕರರಿಗೆ ತಮ್ಮ ತಮ್ಮ ಬಸ್ ಗಳನ್ನು ತಗೆದುಕೊಂಡು ಹೋಗುವಂತೆ ಹೇಳಿದರು.

ಅಧಿಕಾರಿಗಳು ಹೀಗೆ ಹೇಳುತ್ತಿದ್ದಂತೆ ಅವರ ಮಾತಿನ ಉದ್ದೇಶವನ್ನು ತಿಳಿದುಕೊಂಡ ನೌಕರರು ನಾವು ಯಾವುದೇ ಕಾರಣಕ್ಕೂ ಬಸ್ ಗಳನ್ನು ತಗೆದುಕೊಂಡು ಡಿಪೋ ಗಳಿಗೆ ಹೊಗೊದಿಲ್ಲ ನೀವು ಏನಾದರೂ ಮಡಿಕೊಳ್ಳಿ ಎಂದು ಖಡಕ್ ಆಗಿ ಹೇಳಿದರು.

ಹೀಗೆ ಹೇಳುತ್ತಿದ್ದಂತೆ ಮಾಡಿಕೊಂಡಿದ್ದ ಪ್ಲಾನ್ ಕೂಡಾ ಎಡವಟ್ಟಾಯಿತೆಂದುಕೊಂಡು ಸುಮ್ಮನಾದರೂ. ನಿಲ್ದಾಣಗಲ್ಲಿರುವ ಬಸ್ ಗಳನ್ನು ಡಿಪೋ ಗಳಿಗೆ ಕಳಿಸಿ ಖಾಲಿ ಮಾಡಿಸಿದ ನಂತರ ಖಾಸಗಿ ವಾಹನಗಳನ್ನು ಓಡಿಸೊದು ಅಧಿಕಾರಿಗಳ ಪ್ಲಾನ್ ಆಗಿತ್ತು.

ಆದರೆ ಪ್ಲಾನ್ ತಿಳಿದುಕೊಂಡ ನೌಕರರು ಇದಕ್ಕೇ ಒಪ್ಪದೇ ತಮ್ಮ ಪಾಡಿಗೆ ತಾವುಗಳು ಹೋರಾಟವನ್ನು ಮುಂದುವರೆಸಿದ್ರು. ಒಟ್ಟಾರೆ ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ಸಾರಿಗೆ ನೌಕರರ ಹೋರಾಟ ದಿನದಿಂದ ದಿನಕ್ಕೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಇನ್ನಾದರೂ ರಾಜ್ಯ ಸರ್ಕಾರ ಎಚ್ಚೇತ್ತುಕೊಂಡು ಇವರೊಂದಿಗೆ ಮಾತುಕತೆ ಮಾಡಬೇಕು ಇಲ್ಲವಾದ್ರೆ ಇನ್ನೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ.