ಉತ್ಸಾಹಿ ರಾಜೇಶ್ವರಿ ಸಾಲಗಟ್ಟಿ ಅವರೇ ಈ ಬಾರಿ ಬೆಸ್ಟ್ ಎನ್ನುತ್ತಿ ದ್ದಾರೆ 16 ನೇ ವಾರ್ಡ್ ಮತದಾ ರರು – ವಾರ್ಡ್ ನಲ್ಲಿ ಸಿಗುತ್ತಿದೆ ಅಭೂತಪೂರ್ಣ ಜನ ಬೆಂಬಲ…..

Suddi Sante Desk

ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿಚಾರ ಕುರಿತಂತೆ ಧಾರವಾಡದ 16ನೇ ವಾರ್ಡ್ ಮತದಾರರು ಬದಲಾವಣೆ ಬಯಸಿದಂತೆ ಕಾಣುತ್ತಿದೆ.

ಹೊಸ ಕನಸುಗಳೊಂದಿಗೆ ಹೊಸ ಹೊಸ ಭರವಸೆ ಗಳೊಂದಿಗೆ ಯುವ ಉತ್ಸಾಹಿ ರಾಜೇಶ್ವರಿ ಸಾಲಗಟ್ಟಿ ಇವರಿಗೆ ವಾರ್ಡ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನ ಬೆಂಬಲ ಕಂಡು ಬರುತ್ತಿದೆ.

ಈ ಹಿಂದೆ ಅಧಿಕಾರ ಇಲ್ಲದ ಸಮಯದಲ್ಲೂ ಕೂಡಾ ವಾರ್ಡ್ ನಲ್ಲಿ ಬಿಜೆಪಿ ಪಕ್ಷದ ಶಾಸಕರು ಸಂಸದ ರೊಂದಿಗೆ ಸಾಕಷ್ಟ ಜನಪರ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿದ್ದನ್ನು ಮುಂದಿಟ್ಟುಕೊಂಡು ವಾರ್ಡ್ ನ ಜನತೆ ಈ ಬಾರಿ ಹೇಗಾದರೂ ಮಾಡಿ ಇವರೇ ಬೇಸ್ಟ್ ಎನ್ನುತ್ತಾ ಬೆಂಬಲಿಸುತ್ತಿದ್ದಾರೆ.

ಉತ್ಸಾಹದಿಂದ ವಾರ್ಡ್ ನಲ್ಲಿ ಪ್ರಚಾರಕ್ಕೆ ಹೋದ ಸಮಯದಲ್ಲಿ ಬೆಂಬಲ ಗೆಲುವಿನ ಆತ್ಮ ವಿಶ್ವಾಸ ವನ್ನು ತುಂಬುತ್ತಿದ್ದಾರೆ.ನಾ ಮುಂದು ನೀ ಮುಂದು ಎನ್ನುತ್ತಾ ಮತದಾರರೇ ಮುಂದೇ ನಿಂತುಕೊಂಡು ನಿಮಗೆ ನಮ್ಮ ಬೆಂಬಲ ನಮ್ಮ ಮತ ನಿಮಗೆ ಎನ್ನುತ್ತಾ ಇವರಿಗೆ ಒಂದು ಅವಕಾಶವನ್ನು ಕೊಡೋಣ ಎಂದುಕೊಂಡು ಆಶೀರ್ವಾದವನ್ನು ಮಾಡುತ್ತಿದ್ದಾರೆ.

ಹೀಗಾಗಿ ಈ ಬಾರಿ ವಾರ್ಡ್ ನಲ್ಲಿ ಖಂಡಿತ ವಾಗಿಯೂ ಬದಲಾವಣೆಯ ಗಾಳಿ ಬೀಸಿದ್ದು ಹೆಚ್ಚಿನ ಪ್ರಮಾಣದಲ್ಲಿ ರಾಜೇಶ್ವರಿ ಸಾಲಗಟ್ಟಿ ಅವರ ಗೆಲುವಿನ ಅಲೆ ಕಂಡು ಬರುತ್ತಿದ್ದು ಇದರ ನಡುವೆ ವಾರ್ಡ್ ನಲ್ಲಿ ಇವರು ಮತಯಾಚನೆಯನ್ನು ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು.ಪ್ರಮೋದ ಕಾರಕುನ,ರಾಜು ಕೊಟೆನ್ನವರ ಸೇರಿದಂತೆ ಹಲವರು ಸಾಥ್ ನೀಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.