ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 3 ರ ಬಿಜೆಪಿ ಯ ಅಭ್ಯರ್ಥಿಯಾಗಿ ಈರೇಶ ಅಂಚಟಗೇರಿ ನಾಮಪತ್ರ ಸಲ್ಲಿಸಿದರುಇಂದು ಪಕ್ಷದ ಅಭ್ಯರ್ಥಿಯಾಗಿ ಕಮಲಾಪೂರ ಬಡಾವಣೆಯ ಗುರು ಹಿರಿಯರು ಮತ್ತು ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದರು.
ಕೋವಿಡ್ ನಿಯಮಾನುಸಾರ ತೆರಳಿ ನಾಮಪತ್ರ ಪಾಲಿಕೆಯ ಅಧಿಕಾರಿಗಳಿಗೆ ತಮ್ಮ ಉಮೇದುವಾ ರಿಕೆಯನ್ನು ಸಲ್ಲಿಸಿದರು.
ಈ ಒಂದು ಸಂಧರ್ಭದಲ್ಲಿ ಗಿರಿಯಪ್ಪಣ್ಣ ಸಪೂರಿ, ಭೀಮಸಿ ಇಸರನ್ನವರ,ಬಸವಣ್ಣೆಪ್ಪ ಅಣ್ಣಿಗೇರಿ, ರಾಜಶೇಖರ ಬೆಳ್ಳಕ್ಕಿ,ಸೋಮಶೇಖರ್ ಉಡಕೇರಿ, ಜೆ ಎಲ್ ಜಾದವ್ ಬಸವರಾಜ್ ಕೆಂಚನಹಳ್ಳಿ, ರಾಜೇಶ್ವರಿ ಅಳಗವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು