ಧಾರವಾಡ –
ಅಕ್ರಮವಾಗಿ ಮಧ್ಯ ಸಾಗಾಟ ಮಾಡುತ್ತಿದ್ದ ಆರೋ ಪಿ ಕ್ರತಿಕ ಸುಭಾಸ ಕಲಾಲ (30)ನನ್ನು ತಡೆದು ಪರಿ ಶೀಲಿಸಿದಾಗ 14.58 ಲೀಟರ್ ಮಧ್ಯ ಪತ್ತೆಯಾಗಿದ್ದು ಆರೋಪಿ ಪರಿಶೀಲನೆ ಸಮಯದಲ್ಲಿ ಪರಾರಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ.ಮಧ್ಯ ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಧಾರವಾಡ ಉಪ ವಿಭಾಗದ ಅಬಕಾರಿ ಇನ್ಸ್ಪೆಕ್ಟರ್ ಪ್ರಕರಣ ದಾಖಲಿಸಿದ್ದಾರೆ.ಕೋವಿಡ್ 19 ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಮಿತ್ಯ ಜಿಲ್ಲಾಧಿಕಾರಿಗಳು ಲಾಕ್‍ಡೌನ್ ಅವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಮಧ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಿ ಆದೇಶಿಸಿದ್ದಾರೆ.
ಆದರೆ ಆರೋಪಿಯು ಈ ಆದೇಶವನ್ನು ಉಲ್ಲಂಘಿ ಸಿದ್ದು ಧಾರವಾಡ ಸವದತ್ತಿ ರಸ್ತೆ ಮರೆವಾಡ ಕ್ರಾಸ್ ನಲ್ಲಿ ಅಬಕಾರಿ ಸಿಬ್ಬಂದಿ ಕಾವಲು ಮಾಡುತ್ತಿದ್ದಾಗ ಆಗಮಿಸಿದ ಯುವಕ ವಿಚಾರಣೆ ವೇಳೆಯಲ್ಲಿ ಪರಾ ರಿಯಾಗಲು ಪ್ರಯತ್ನಿಸಿದನು. ಅನುಮಾನಗೊಂಡು ಪರೀಕ್ಷಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪರಿ ಶೀಲನೆ ಸಮಯದಲ್ಲಿ ಆರೋಪಿಯು ಪರಾರಿಯಾ ಗಿದ್ದು ಪತ್ತೆಹಚ್ಚಿ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆಯೂ ಧಾರವಾಡ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಉಪ ವಿಭಾ ಗದ ಉಪ ಅಧೀಕ್ಷಕ ಎ.ಬಿ.ಮಠಪತಿ ನೇತೃತ್ವದಲ್ಲಿ, ಅಬಕಾರಿ ನಿರೀಕ್ಷಕ ಮಲ್ಲಪ್ಪ ಕುಂದಗೋಳ, ಪೇದೆಗ ಳಾದ ವಿ.ಎಸ್.ಮುಶಣ್ಣವರ, ಎಸ್.ಜಿ.ಮುಜಾವರ, ವಾಹನ ಚಾಲಕ ಬಿ.ಎ.ಪಡಕೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು