ಧಾರವಾಡ-
ಎಸಿ ಶಾರ್ಟ್ ಸರ್ಕ್ಯೂಟ್ ಆಗಿ ಕಾರೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಧಾರವಾಡದ ಉದಯ ಹಾಸ್ಟೇಲ್ ಸರ್ಕಲ್ ಬಳಿ ನಡೆದಿದೆ.

ಹೌದು ಮನೆಯಿಂದ ಮಾರುಕಟ್ಟೆಯತ್ತ ಕಾರು ಹೊರಟಿತ್ತು ಆದರೆ ಎಸಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡು ನೋಡು ನೋಡುತ್ತಲೆ ಕಾರು ಸುಟ್ಟು ಭಸ್ಮವಾಗಿದೆ.

ಟಾಟಾ ಇಂಡಿಕಾ ಕಾರು ಇದಾಗಿದ್ದು ಹಳೆಯ ಕಾರು ಇದಾಗಿದ್ದು ಎಸಿ ಯಲ್ಲಿನ ಶಾರ್ಟ್ ಸರ್ಕ್ಯೂಟ್ ನಿಂದ ಈ ಒಂದು ಘಟನೆ ಸಂಭವಿಸಿದ್ದು ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ
ಇನ್ನೂ ವಿಷಯ ತಿಳಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಗಳು ವಿದ್ಯಾಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಬೆಂಕಿಯನ್ನು ನಂದಿಸಿ ದರು.







ಸಧ್ಯ ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿ ಕೊಂಡಿರುವ ಪೊಲೀಸರು ಇವರು ಬೆಂಕಿಗೆ ನಿಖರ ವಾದ ಕಾರಣವನ್ನು ಹುಡುಕುತ್ತಿದ್ದಾರೆ.ಇನ್ನೂ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರನ್ನು ಚಲಾವಣೆ ಮಾಡು ತ್ತಿದ್ದ ಕಾರಿನ ಮಾಲೀಕ ಕೆಳಗೆ ಇಳಿದು ನೋಡು ನೋಡುತ್ತಲೆ ಬೆಂಕಿಯ ಕೆನ್ನಾಲಿಗೆ ಕಾರನ್ನು ಆವರಿಸಿ ಕೊಂಡು ಸುಟ್ಟು ಕರಕಲು ಮಾಡಿತು.