This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಕಲ್ಬುರ್ಗಿ

ಶಾಲೆಗೆ ಬರದಿದ್ದರೂ ಬರುತ್ತೆ ಸಂಬಳ – ಬಯಲಾಯಿತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಎಡವಟ್ಟು…..ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಆದೇಶ…..

WhatsApp Group Join Now
Telegram Group Join Now

ಕಲಬುರಗಿ

ಶಾಲೆಗೆ ಬರದಿದ್ದರೂ ಬರುತ್ತೆ ಸಂಬಳ – ಬಯಲಾಯಿತು ಶಿಕ್ಷಣ ಇಲಾಖೆಯ ಅಧಿಕಾರಿ ಗಳ ಎಡವಟ್ಟು…..ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಆದೇಶ

ಸತತವಾಗಿ 11 ತಿಂಗಳ ಶಾಲೆಗೆ ಗೈರಾಗಿದ್ದರು ಕೂಡಾ ಶಿಕ್ಷಕರೊಬ್ಬರಿಗೆ ಸಂಬಳ ನೀಡಿದ ಘಟನೆ ಕಲಬುರಗಿ ಯಲ್ಲಿ ಕಂಡು ಬಂದಿದೆ.ಹೌದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೆರಿ ಅಂಬಲಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥ ಮಿಕ ಶಾಲೆಯ ಶಿಕ್ಷಕ ರೇಣುಕಾಚಾರ್ಯ ಸತತ 11 ತಿಂಗಳು ಶಾಲೆಗೆ ಗೈರಾಗಿದ್ದಾರೆ.

ಇವರು ಶಾಲೆಗೆ ಬರದಿದ್ದರೂ ಕೂಡಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಬಳವನ್ನು ನೀಡಿ ದ್ದಾರೆ.ಇವರು ಮಾಡಿದ ಎಡವಟ್ಟಿನಿಂದ ಕೆಲವೊಮ್ಮೆ ಪ್ರಮಾದಗಳು ನಡೆಯುತ್ತವೆ ಎಂಬೊದಕ್ಕೆ ಈ ಒಂದು ಪ್ರಕರಣವೇ ಸಾಕ್ಷಿ ಯಾಗಿದೆ. 11 ತಿಂಗಳು ಗೈರಾಗಿದ್ದರೂ ವೇತನ ಪಾವತಿಸಿ ಶಿಕ್ಷಣ ಇಲಾಖೆ ಪ್ರಮಾದವನ್ನು ಎಸಗಿದೆ.

ಈ ಒಂದು ತಪ್ಪಿನಿಂದಾಗಿ ಮೂವರು ಅಧಿಕಾರಿ ಸಿಬ್ಬಂದಿಯನ್ನು ಸೇವೆಯಿಂದ ಕಡ್ಡಾಯ ನಿವೃತ್ತಿ ಗೊಳಿಸಿ ಹಾಗೂ ಒಬ್ಬ ನಿವೃತ್ತ ಬಿಇಒಗೆ ನಿವೃತ್ತಿ ವೇತನದಲ್ಲಿ ಶಾಶ್ವತವಾಗಿ ಶೇ 50ರಷ್ಟು ವೇತನ ತಡೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಮಾಡಿದೆ.ಆಳಂದ ತಾಲೂಕಿನ ಕೆರಿ ಅಂಬಲಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರೇಣುಕಾಚಾ ರ್ಯ ಅವರು ಶಾಸಕರೊಬ್ಬರ ಸಹೋದರನಾಗಿ ದ್ದಾರೆ.

ಸತತ 11 ತಿಂಗಳು ಶಾಲೆಗೆ ಗೈರಾಗಿದ್ದರು.ವೇತನ ಬಿಡುಗಡೆ ಮಾಡಿದ ಆರೋಪ ಸಾಬೀತಾಗಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ, ಪ್ರಥಮ ದರ್ಜೆ ಸಹಾಯಕ ಲೋಕಪ್ಪ ಜಾಧವ, ಗುರುರಾಜರಾವ್ ಕುಲಕರ್ಣಿ ಅವರನ್ನು ಸೇವೆ ಯಿಂದ ಇಲಾಖೆ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ

ಈ ಅವಧಿಯಲ್ಲಿ ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಯಾಗಿದ್ದ ಭರತರಾಜ ಸಾವಳಗಿ ಅವರು ಇತ್ತೀಚೆಗೆ ನಿವೃತ್ತಿ ಆಗಿದ್ದು ಅವರಿಗೆ ಬರುವ ವೇತನದಲ್ಲಿ ಶಾಶ್ವತವಾಗಿ ಶೇ 50ರಷ್ಟು ನಿವೃತ್ತಿ ವೇತನವನ್ನು ತಡೆಹಿಡಿಯಲಾಗಿದೆ.ಸಹ ಶಿಕ್ಷಕ ರೇಣುಕಾಚಾರ್ಯ ಅವರು 2011ರ ಅಕ್ಟೋಬ ರ್‌ನಿಂದ 2012ರ ಆಗಸ್ಟ್‌ ವರೆಗೆ ಕೆರಿ ಅಂಬಲಗಾ ಗ್ರಾಮದ ಶಾಲೆಗೆ ಹಾಜರಾಗಿರಲಿಲ್ಲ.

ಆಗ ವೇತನ ಬಿಡುಗಡೆ ಮಾಡಿದ್ದ ಕ್ಷೇತ್ರ ಶಿಕ್ಷಣಾ ಧಿಕಾರಿ ಆಗಿದ್ದ ಭರತರಾಜ ಸಾವಳಗಿ, ಚಿತ್ರಶೇ ಖರ್ ದೇಗಲಮಡಿ,ವೆಂಕಯ್ಯ ಇನಾಮದಾರ, ಹಿಂದಿನ ವಲಯ ಸಹಾಯಕ ಶಿಕ್ಷಣಾಧಿಕಾರಿ ಜೈ ಪ್ರಕಾಶ ಅಕ್ಕಿ, ಪ್ರಥಮ ದರ್ಜೆ ಸಹಾಯಕ ಲೋಕಪ್ಪಾ ಜಾಧವ, ಗುರುರಾಜರಾವ್ ಕುಲಕರ್ಣಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹೆಚ್ಚುವರಿ ಆಯುಕ್ತರು ಸೂಚನೆ ನೀಡಿದ್ದು

ತನಿಖೆ ಬಳಿಕ ನಾಲ್ವರ ವಿರುದ್ಧ ಕ್ರಮ‌ ಜರುಗಿ ಸಲಾಗಿದೆ.ಸದ್ಯ ಚಿತ್ರಶೇಖರ್ ದೇಗಲಮಡಿ ಯಾದಗಿರಿ ಡಿಡಿಪಿಐ ಕಚೇರಿ ಸಮಗ್ರ ಶಿಕ್ಷಣ ಕರ್ನಾಟಕದ ಡಿವೈಪಿಪಿಯಾಗಿ,ಗುರು ರಾಜರಾವ್ ಕುಲಕರ್ಣಿ ಕಲಬುರಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ರಾಗಿ

ಲೋಕಪ್ಪ ಜಾಧವ ಆಳಂದ ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ಯೋಜನೆಯ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸು ತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 


Google News

 

 

WhatsApp Group Join Now
Telegram Group Join Now
Suddi Sante Desk