ದೂರದ ಕತಾರ್ ನಲ್ಲೂ ವಿಶ್ವ ಪರಿಸರ ದಿನಾಚರಣೆ ಸಸಿ ನೆಟ್ಟು ವಿಶೇಷವಾಗಿ ಕಾರ್ಯಕ್ರಮ ಆಚರಣೆ…..

Suddi Sante Desk

ಕತಾರ್ –

ವಿಶ್ವ ಪರಿಸರ ದಿನಾಚರಣೆ ಯನ್ನು ದೂರದ ಕತಾರ್ ದೇಶದಲ್ಲೂ ಆಚರಣೆ ಮಾಡಲಾಯಿತು. ಕರ್ನಾಟಕ ಸಂಘ ಕತಾರ್ ವತಿಯಿಂದ ‘ವಿಶ್ವ ಪರಿಸರ ದಿನಾಚರ ಣೆಯನ್ನು ‘ಗಅಲ್ಫಾರ್ ಅಲ್ ಮಿಸ್ನಾದ್’ ಸಂಸ್ಥೆಯ ನೂತನ  ಜೆರ್ಯ್ ಅಲ್ ಸಮೂರ್ ಆವರಣದಲ್ಲಿ ಆಚರಿಸಲಾಯಿತು

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಬಾಬುರಾಜನ್ ಆಗಮಿಸಿದ್ದರು.ಗೌರವಾನ್ವಿತ ಅತಿಥಿಯಾಗಿ ಹೇಮ ಚಂದ್ರನ್ ಹಿರಿಯ ಪ್ರಧಾನ ವ್ಯವಸ್ಥಾಪಕರು ಮೂಲ ಸೌಕರ್ಯಗಳ ವಿಭಾಗ,ಗಲ್ಫಾರ್ ಅಲ್ ಮಿಸ್ನಾದ್ ಸಂಸ್ಥೆ ಉಪಸ್ಥಿತರಿದ್ದರು.

ಕರ್ನಾಟಕ ಮೂಲದ ಇತರ ಸಹೋದರ ಸಂಘ ಗಳಾದ ತುಳು ಕೂಟ,ಬಂಟ್ಸ್ ಕತಾರ್, ಕೆ. ಎಂ.ಸಿ.ಎ, ಎಂ.ಸಿ.ಎ, ಎಂ.ಸಿ.ಸಿ ಹಾಗು ಎಸ್.ಕೆ.ಎಂ.ಡ್ಬ್ಲು.ಎ. ಇವುಗಳ ಅಧ್ಯಕ್ಶ್ರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುಮಾರು ಒಂದು ವರ್ಷದ ನಂತರ ಅಂತರ್ಜಾಲದ ಹೊರಗೆ ಕಾರ್ಯಕ್ರಮವನ್ನು ಮಾಡಲು ಸಾಧ್ಯ ವಾಯಿತು.ಆಗಮಿಸಿದ್ದವರೆಲ್ಲರೂ ಮಹಾಮಾರಿ ಯನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಂಡಿ ದ್ದರು.

ಕೈಶುಚಿ, ಬಾಯಿ ಮೂಗುಗಳಿಗೆ ಮುಖವಾಡ, ‘ಎತಿರಾಝ್’ ತಂತ್ರಾಂಶ ಹಾಗು ಬಹುಮಂದಿ ಲಸಿಕೆಗಲನ್ನು ಪಡೆದಿದ್ದರು.ಮುರಳೀದರ್ ರಾವ್, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳು ಕಾರ್ಯಕ್ರಮವನ್ನು ಸ್ವಾಗತ ಸಂದೇಶದೊಂದಿಗೆ ಪ್ರಾರಂಬಿಸಿದರು.ಹೆಚ್ಚು ತಡ ಮಾಡದೆ ಆಗಮಿಸಿದ್ದ ಗಣ್ಯರು ಮತ್ತು ಸಭಿಕರು ಗಿಡ ನೆಡುವುದರಲ್ಲಿ ನಿರತ ರಾದರು.ಹೊಂಡಗಲನ್ನು ಮುಂಚಿತವಾಗಿಯೆ ತೋಡಿಡಲಾಗಿತ್ತು.ಮಾವು ಬೇವು ಮುಂತಾದ ಸಸಿಗಳನ್ನು ತಂದು ಆಗಮಿಸಿದ್ದ ಎಲ್ಲರೂ ನೆಟ್ಟು ಸಂತಸ ವ್ಯಕ್ತ ಪಡಿಸಿದರು.

ನಂತರ ಒಳಾಂಗಣ ಪ್ರವೇಶಿಸಿ ಕಾರ್ಯಕ್ರಮದ ಮುಂದಿನ ಭಾಗದಲ್ಲಿ ಮುಖ್ಯ ಅತಿಥಿಗಳ ಭಾಷಣ, ಗೌರವಾನ್ವಿತ ಅತಿಥಿಗಳ ಕಿರು ಸಂದೇಶ, ಸಂಘದ ಜಂಟಿ ಕಾರ್ಯದರ್ಶಿಯಿಂದ ಪರಿಸರ ದಿನಾಚರ ಣೆಯ ಅವಶ್ಯಕತೆ ಮತ್ತು ಮಹತ್ವ ತಿಳಿಸಲಾಯಿತು. ಶ್ರೀ ಕುಮಾರಸ್ವಾಮಿ, ಸಂಘದ ಪರಿಸರ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಅವರು ವಂದ ನಾರ್ಪಣೆಗಳನ್ನು ಸಲ್ಲಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.