ಹೈದರಾಬಾದ್ –
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ ರಾಮರಾವ್ ಅವರ ನಾಲ್ಕನೇ ಪುತ್ರಿ ಕಾಂತಮನೇನಿ ಉಮಾ ಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹೌದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಉಮಾಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೆಲವು ತಿಂಗಳಿನಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು ಟಿಡಿಪಿ ಸಂಸ್ಥಾಪಕ ಎನ್ ಟಿ ಆರ್ ಅವರ 12 ಮಕ್ಕಳಲ್ಲಿ ಕಿರಿಯ ಪುತ್ರಿ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ನಂದಮೂರಿ ಕುಟುಂಬದಲ್ಲಿ ದುರಂತ ಸಂಭವಿಸಿದ್ದು ಭಾವನಾತ್ಮಕ ಒತ್ತಡದಿಂದ ಉಮಾಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎನ್ ಟಿಆರ್ ಕುಟುಂಬದ ಹಲವು ಸದಸ್ಯರು ಈಗಾಗಲೇ ಉಮಾಮಹೇಶ್ವರಿ ಮನೆಗೆ ತಲುಪಿ ದ್ದಾರೆ.ಬಾಲಕೃಷ್ಣ,ಚಂದ್ರಬಾಬು,ನಾರಾ ಲೋಕೇಶ್ ಈಗಾ ಗಲೇ ಆಗಮಿಸಿದ್ದು ವಿದೇಶದಲ್ಲಿರುವ ಜೂನಿಯರ್ ಎನ್ ಟಿಆರ್ ಗೆ ಮಾಹಿತಿ ನೀಡಲಾಗಿದೆ.ಉಮಾಮಹೇಶ್ವರಿ ಮೃತದೇಹವನ್ನು ಉಸ್ಮಾನಿಯಾಕ್ಕೆ ಸ್ಥಳಾಂತರಿಸಲಾಗು ವುದು.
ಉಮಾಮಹೇಶ್ವರಿ ಅವರ ಹಠಾತ್ ನಿಧನ ನಂದಮೂರಿ ಅಭಿಮಾನಿಗಳು ದುಃಖದಲ್ಲಿ ಮುಳುಗಿದ್ದು ಅವರು ತಮ್ಮ ನಿವಾಸದಲ್ಲಿ ನಿಧನರಾದರು.ಉಮಾಮಹೇಶ್ವರಿ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.ಎನ್ ಟಿ ಆರ್ ಎರಡನೇ ಪುತ್ರಿ ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ, ಮತ್ತೊಬ್ಬ ಪುತ್ರಿ ಲೋಕೇಶ್ವರಿ,ಕೊನೆಯ ಮತ್ತು ಕಿರಿಯ ಮಗಳು ಉಮಾಮಹೇಶ್ವರಿ.ಸದ್ಯ ಆಕೆಯ ಪಾರ್ಥಿವ ಶರೀರವನ್ನು ದರ್ಶನಕ್ಕಾಗಿ ಮನೆಯಲ್ಲಿ ಇರಿಸಲಾಗಿದೆ. ಎನ್‌ಟಿಆರ್ ಅವರ ಕುಟುಂಬ ಸದಸ್ಯರು,ಸಂಬಂಧಿಕರು ಮತ್ತು ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಉಮಾಮ ಹೇಶ್ವರಿ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.