ಹೈದ್ರಾಬಾದ್ –
ಬಿಜೆಪಿ ಯಿಂದ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ನಿವೃತ್ತ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಅವರು ಆಂಧ್ರಪ್ರದೇಶ ತಿರುಪತಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ಶೀಘ್ರವೇ ಉಪಚುನಾವಣೆ ನಡೆಯುವ ಸಾಧ್ಯತೆ ಇದ್ದು, ಈ ವೇಳೆ ರತ್ನಪ್ರಭಾ ಅವರು ಬಿಜೆಪಿ ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.ರತ್ನಪ್ರಭಾ ಅವರು ಮೂಲತಃ ಆಂಧ್ರದ ಪ್ರಕಾಶಂ ಜಿಲ್ಲೆಯವರು.
ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾದ ಅವರು, ಈ ಹಿಂದೆ ಸಿಎಂ ವೈ.ಎಸ್.ರಾಜಶೇಖರ ರೆಡ್ಡಿ ಅವಧಿಯಲ್ಲಿ ಕೆಲಕಾಲ ನಿಯೋಜನೆ ಮೇಲೆ ಆಂಧ್ರಪ್ರದೇಶ ಸರ್ಕಾರದಲ್ಲೂ ಕೆಲಸ ಮಾಡಿ, ಬಳಿಕ ಕರ್ನಾಟಕಕ್ಕೆ ಮರಳಿದ್ದರು. ರತ್ನಪ್ರಭಾ ಅವರ ತಂದೆ, ಸೋದರ ಮತ್ತು ಪತಿ ಕೂಡಾ ಐಎಎಸ್ ಅಧಿಕಾರಿ ಗಳಾಗಿ ಸೇವೆ ಸಲ್ಲಿಸಿದ ಅನುಭವದ ಜೊತೆಗೆ ಆಂಧ್ರದಲ್ಲಿ ಪ್ರಭಾವ ಹೊಂದಿದ್ದಾರೆ.
ಹೀಗಾಗಿ ಸೂಕ್ತ ಅಭ್ಯರ್ಥಿಯಾಗಿ ಹುಡುಕಾಡುತ್ತಿದ್ದ ಬಿಜೆಪಿ ಗೆ ಈಗಾಗಲೇ ಕರ್ನಾಟಕದಲ್ಲಿ ತಮ್ಮ ಪಕ್ಷ ಸೇರಿರುವ ರತ್ನಪ್ರಭಾ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ನಿರ್ಧಾರ ಕೈಗೊಂಡಿತ್ತು. ಆದರೆ ತಿರುಪತಿಯಲ್ಲಿ ತಮ್ಮ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿಯೇ ತೀರುವು ದಾಗಿ ಜನಸೇನಾ ಪಕ್ಷ ಕೂಡಾ ಹಠಕ್ಕೆ ಬಿದ್ದ ಹಿನ್ನೆಲೆ ಯಲ್ಲಿ, ರತ್ನಪ್ರಭಾ ಅವರನ್ನೇ ಜಂಟಿ ಅಭ್ಯರ್ಥಿಯ ನ್ನಾಗಿ ಕಣಕ್ಕಿಳಿಸಲು ಉಭಯ ಪಕ್ಷಗಳು ಸಮ್ಮತಿ ಸಿವೆ.