ಚೆನ್ನೈ –
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈಗೆ ಜೀವ ಬೆದರಿಕೆ ಇದೆ ಎಂಬ ವಿಚಾರವನ್ನು ಗುಪ್ತಚರ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ಅಣ್ಣಾಮಲೈ ಅವರಿಗೆ ಸರ್ಕಾರ ವೈ ಪ್ಲಸ್ ಸೆಕ್ಯೂರಿಟಿಯನ್ನು ಒದಗಿಸಿದೆ.

ನನಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದ್ದವು ಈ ಹಿನ್ನೆಲೆ ಪೊಲೀಸರು ಭದ್ರತೆ ಒದಗಿಸಿದ್ದಾರೆ ಎಂದು ಅಣ್ಣಾ ಮಲೈ ಕೂಡ ತಿಳಿಸಿದ್ದಾರೆ.

ಸದ್ಯ ಅವರ ಭದ್ರತೆಗೆ 11 ಜನ ಕಮಾಂಡೋಗಳು, ಇಬ್ಬರು ಗನ್ ಮ್ಯಾನ್ ಗಳು ಇರಲಿದ್ದಾರೆ. ಹಾಗೇ ಅವರ ಮನೆಗೂ ಸಹ ಭದ್ರತೆ ಒದಗಿಸಲಾಗಿದೆ.

ಅಣ್ಣಾ ಮಲೈ 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಆನಂತರ ಬಿಜೆಪಿ ಪಕ್ಷ ಸೇರಿದ್ದರು. ತಮಿಳುನಾಡಿನಲ್ಲಿ ಚುನಾವಣೆ ಹತ್ತಿರ ಇರುವ ಕಾರಣ ತಮಿಳುನಾಡಿನ ರಾಜಕೀಯದಲ್ಲಿ ಅಣ್ಣಾ ಮಲೈ ಫುಲ್ ಆಕ್ಟೀವ್ ಆಗಿದ್ದು ಇವೆಲ್ಲದರ ನಡುವೆ ಈಗ ಇವರಿಗೆ ಜೀವ ಬೆದರಿಕೆ ಬಂದಿದ್ದು ಇವೆ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದಾರೆ.