ಬೆಂಗಳೂರು –

ಇತ್ತೀಚೆಗೆ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಕಲಘಟಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಗುರುನಾಥ ಶಿವಪ್ಪ ದಾನವೇನವರ ಅವರನ್ನು ನೇಮಕ ಮಾಡಲಾಗಿತ್ತು.ಮೊದಲು ತಾಲ್ಲೂಕಿನಲ್ಲಿ ಮಂಜುನಾಥ ಮುರಳಿ ಅವರು ಅಧ್ಯಕ್ಷ ರಾಗಿ ಕೆಲಸವನ್ನು ಮಾಡುತ್ತಿದ್ದರು.ಉತ್ತಮ ರೀತಿಯಲ್ಲಿ ಕಾರ್ಯವನ್ನು ಮಾಡುತ್ತಿದ್ದ ಇವರ ಹುದ್ದೆಗೆ ಗುರುನಾಥ ಶಿವಪ್ಪ ದಾನವೇನವರ ಅವರ ನ್ನು ನೇಮಕ ಮಾಡಲಾಗಿತ್ತು.

ಈ ಒಂದು ವಿಚಾರದಲ್ಲಿ ಜಿಲ್ಲೆಯಲ್ಲಿ ಅದರಲ್ಲೂ ಕಲಘಟಗಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಸಮಾ ಧಾನ ಉಂಟಾಗಿತ್ತು.ಇದರಿಂದಾಗಿ ಎಚ್ಚೆತ್ತುಕೊಂಡ ಕೈ ಪಕ್ಷದ ಹೈಕಮಾಂಡ್ ನೂತನ ಅಧ್ಯಕ್ಷರ ನೇಮ ಕಾತಿಗೆ ಬ್ರೇಕ್ ಹಾಕಿ ಮಂಜುನಾಥ ಮುರಳಿ ಅವರ ನ್ನು ಮುಂದುವರಿಸಿ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆದೇಶ ಮಾಡಿ ದ್ದಾರೆ.