ಧಾರವಾಡ –
ಧಾರವಾಡದ ಸೂಪರ್ ಮಾರುಕಟ್ಟೆ ಪ್ರದೇಶ ಕ್ಕೆ ಮಾಜಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ ಪರಿಶೀಲನೆ ಮಾಡಿದರು

ಸಧ್ಯ ಧಾರವಾಡದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆ ಪ್ರದೇಶ ವಾಗಿದೆ. ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಹೀಗಾಗಿ ಇದನ್ನೇ ನಂಬಿಕೊಂಡು ವ್ಯಾಪಾರಸ್ಥರಿಗೆ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ಆಗುತ್ತಿದ್ದು ಈ ಒಂದು ಹಿನ್ನಲೆಯಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಭೇಟಿ ನೀಡಿದರು

ಇಡೀ ಮಾರುಕಟ್ಟೆ ಪ್ರದೇಶದ ತುಂಬೆಲ್ಲಾ ಒಂದು ಸುತ್ತು ಹಾಕಿದ ಸಂತೋಷ ಲಾಡ್ ಅವರು ಸ್ಥಳದಲ್ಲೇ ಇದ್ದ ಸಾರ್ವಜನಿಕರೊಂದಿಗೆಅಹವಾಲು ಆಲಿಸಿ ಸಮಸ್ಯೆ ಯನ್ನು ತಿಳಿದುಕೊಂಡರು

ಇದೇ ವೇಳೆ ಅವೈಜ್ಞಾನಿಕ ರೀತಿಯಲ್ಲಿ ಈ ಒಂದು ಕಾರ್ಯವನ್ನು ಮಾಡಲಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದರು. ಇವರೊಂದಿಗೆ ಕಾಂಗ್ರೆಸ್ ಪಕ್ಷದ ಮುಖಂಡ ಇಸ್ಮಾಯಿಲ್ ತಮಾಟಗಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.






















