ಕಲಘಟಗಿ –
ಬಿಕಾಂ ನಲ್ಲಿ 96 ಫಲಿತಾಂಶ ಪಡೆದು ಐಎಎಸ್ ಕನಸನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ತರಭೇತಿ ಯನ್ನು ಪಡೆಯುತ್ತಿದ್ದ ಧಾರವಾಡದ ಕಲಘಟಗಿ ವಿಧಾನ ಸಭಾ ಕ್ಷೇತ್ರದ ತಾವರಗೇರಿ ಗ್ರಾಮದ ಬಾಲಕಿ ಶ್ರೀದೇವಿ ದ್ಯಾವಪ್ಪನವರ ಇವರಿಗೆ ಮಾಜಿ ಸಂತೋಷ ಲಾಡ್ ಸಹಾಯಹಸ್ತ ಚಾಚಿದಿದ್ದಾರೆ.

ಹೌದು ಈಗಾಗಲೇ ಬೆಂಗಳೂರಿನಲ್ಲಿ ತರಭೇತಿ ಯನ್ನು ಪಡೆಯುತ್ತಿರುವ ಬಾಲಕಿಗೆ ಹಣದ ಕೊರತೆಯಾಗಿತ್ತು ಈ ಕುರಿತಂತೆ ಬಾಲಕಿ ತನ್ನ ಪೋಷಕರೊಂದಿಗೆ ಮಾಜಿ ಸಚಿವ ಸಂತೋಷ ಲಾಡ್ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆ ಯನ್ನು ಬಾಲಕಿ ಹೇಳಿಕೊಂಡಿದ್ದಳು.ಬಾಲಕಿಯ ಮನವಿಗೆ ಮಾಜಿ ಸಚಿವ ಸಂತೋಷ ಲಾಡ್ ಸ್ಪಂದಿಸಿದ್ದಾರೆ.ಅತ್ತ ಮನವಿ ಮಾಡುತ್ತಿದ್ದಂತೆ ಇತ್ತ ಬಾಲಕಿಯ ಪೋಷಕರಿಗೆ ನೆರವಿನ ಡಿಡಿ ಯನ್ನು ಹಸ್ತಾಂತರ ಮಾಡಿದ್ದಾರೆ.

ಇಂದು ಬಾಲಕಿಯ ಗ್ರಾಮಕ್ಕೆ ಮಾಜಿ ಸಚಿವ ಸಂತೋಷ ಲಾಡ್ ಆಪ್ತ ಸಹಾಯಕರಾದ ಹರಿಶಂಕರ್ ಎನ್ ಎಮ್ ಸೇರಿದಂತೆ ಹಲವರು ತೆರಳಿ ಡಿಡಿ ಯನ್ನು ನೀಡಿದರು.ಶ್ರೀದೇವಿ ದ್ಯಾವಪ್ಪನವರ ಬಿಕಾಂ ನಲ್ಲಿ 96 ಪಡೆದು ಸಧ್ಯ ಬೆಂಗಳೂರಿನಲ್ಲಿ ಐಎಎಸ್ ಕೊಚಿಂಗ್ ನ್ನು ಪಡೆಯುತ್ತಿದ್ದಾರೆ.


ತಾವರಗೇರಿ ಗ್ರಾಮದವರಾದ ಇವರಿಗೆ.40 ಸಾವಿರ ರೂಪಾಯಿ ಗಳ ನೆರವನ್ನು ಮಾಜಿ ಸಚಿವ ಸಂತೋಷ ಲಾಡ್ ನೀಡಿದ್ದಾರೆ.ತಾವರಗೇರೆ ಗ್ರಾಮಕ್ಕೆ ಇಂದು ತೆರಳಿ ಆಪ್ತ ಸಹಾಯಕರಾದ ಹರಿಶಂಕರ್ ಎನ್ ಎಮ್, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಎಸ್ ಆರ್ ಪಾಟೀಲ, ಕಾಂಗ್ರೇಸ್ ಪಕ್ಷದ ಮುಖಂಡರಾದ ಬಾಳು ಖಾನಾಪೂರ, ಶಿವಾನಂದ ಮುತ್ತಗಿ,ಬಸಯ್ಯ ಹಿರೇಮಠ ಇನ್ನಿತರ ಬಾಲಕಿಯ ಮನೆಗೆ ತೆರಳಿ ಐಎಎಸ್ ಕನಸಿಗೆ ನೆರವಾದರು.ಇದರೊಂದಿಗೆ ಅಧಿಕಾರ ಇಲ್ಲದಿದ್ದರೂ ತಮ್ಮ ಜವಾಬ್ದಾರಿ ಯನ್ನು ಇವರು ಮೆರೆದು ಮಾದರಿಯಾದರು.