ಧಾರವಾಡ –
ಕರೋನಾ ಸಮಯದಲ್ಲಿ ಜೀವನವನ್ನು ತ್ಯಾಗ ಮಾಡಿ ಹಗಲು ರಾತ್ರಿ ಎನ್ನದೇ ದುಡಿದ ಕೆಲಸವನ್ನು ಮಾಡಿದ ಆಶಾ ಕಾರ್ಯಕರ್ತೆಯರ ನೆರವಿಗೆ ಮಾಜಿ ಸಚಿವ ಸಂತೋಷ ಲಾಡ್ ಮುಂದಾಗಿದ್ದಾರೆ.ಹೌದು ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿನ 200 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಪ್ರೀತಿಯಿಂದ ಸನ್ಮಾನವನ್ನು ಮಾಡಿ ಗೌರವ ಧನವನ್ನು ನೀಡಿ ಗೌರವಿಸಲಿದ್ದಾರೆ ಈಗಾಗಲೇ ಬಳ್ಳಾರಿ ಜಿಲ್ಲೆಯ ಸೋಂಡೂರಿನಲ್ಲಿ ಸಂತೋಷ ಲಾಡ್ ಪ್ರತಿಷ್ಠಾನದಿಂದ ಈ ಒಂದು ಕಾರ್ಯಕ್ರಮ ನಡೆದಿದ್ದು
ಇದೇ ಮಾದರಿಯಲ್ಲಿಯೇ ಡಿಸಂಬರ್ 20 ರಂದು ಸೋಮ ವಾರ ಕಲಘಟಗಿಯ ಅಮೃತ ನಿವಾಸದಲ್ಲಿ ಈ ಒಂದು ಕಾರ್ಯಕ್ರಮ ನಡೆಯಲಿದ್ದು ಸಂತೋಷ ಲಾಡ್ ನೇತ್ರತ್ವ ದಲ್ಲಿ ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರು ಮುಖಂಡರು ಸೇರಿದಂತೆ ಹಲವರ ಸಮ್ಮುಖದಲ್ಲಿಯೇ ಈ ಒಂದು ವಿಶೇಷವಾದ ಕಾರ್ಯಕ್ರಮ ನೇರವೆರಲಿದೆ.
ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸುತ್ತಿರುವ ಇವರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಮಾಜಿ ಸಚಿವ ಸಂತೋಷ ಲಾಡ್ ಬಣ್ಣಿಸಿ ಗೌರವಿಸಿ ಅಭಿನಂದಿಸಿದ್ದಾರೆ
ಇನ್ನೂ ಇತ್ತ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಕೂಡ್ಲಿಗಿ ತಾಲ್ಲೂಕಿನ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಲಾಯಿತು ಮತ್ತು ಅಂಗನವಾಡಿ ಕಾರ್ಯಕರ್ತೆಯ ರನ್ನು ಸನ್ಮಾನಿಸಲಾಯಿತು.ಕೋವಿಡ್ ಸೋಂಕಿನ ಸಂದ ರ್ಭದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕೆಲಸ ಮಾಡಿ ಜನರ ಆರೋಗ್ಯ ಕಾಪಾಡುವಲ್ಲಿ ಅಹರ್ನಿಶಿ ದುಡಿದ ಮಾತೆಯರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾ ಯಿತು.