This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಮಾಜಿ ಸಚಿವ ಸಂತೋಷ ಲಾಡ್ ಕನಸಿನ ಉಚಿತ ಸಂಚಾರಿ ಆರೋಗ್ಯ ಸಹಾಯ ಹಸ್ತ ಸೇವೆಗೆ ವರ್ಷದ ಸಂಭ್ರಮ – ಸರ್ಕಾರಕ್ಕೆ ರಾಜಕೀಯ ನಾಯಕರಿಗೆ ಕಲಘಟಗಿ ಕ್ಷೇತ್ರದಲ್ಲಿನ ಈ ಕಾರ್ಯ ರಾಜ್ಯಕ್ಕೆ ಮಾದರಿ ಯಾಯಿತು…..

WhatsApp Group Join Now
Telegram Group Join Now

ಕಲಘಟಗಿ –

ಅಧಿಕಾರ ಇರಲಿ ಇಲ್ಲದರಿಲಿ ಸದಾ ಒಂದಿಲ್ಲೊಂದು ಸೇವೆಯ ಮೂಲಕ ಧಾರವಾಡದ ಕಲಘಟಗಿ ಕ್ಷೇತ್ರದಲ್ಲಿ ಸೇವೆಯನ್ನು ಮಾಡುತ್ತಿರುವ ಮಾಜಿ ಸಚಿವ ಸಂತೋಷ ಲಾಡ್ ಹತ್ತಾರು ಸಮಾಜ ಮುಖಿ ಕಾರ್ಯಗಳಲ್ಲಿ ಕಳೆದ ವರ್ಷ ಆರಂಭ ಮಾಡಿರುವ ಉಚಿತ ಸಂಚಾರಿ ಆರೋಗ್ಯ ಸಹಾಯ ಹಸ್ತ ಸೇವೆ ಕೂಡಾ ಒಂದಾಗಿದೆ

ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಯಾರಿಗೂ ಯಾವುದೇ ರೀತಿಯಲ್ಲಿ ಆರೋಗ್ಯ ವಿಚಾರದಲ್ಲಿ ಅದರಲ್ಲೂ ತುರ್ತು ಸಂದರ್ಭದಲ್ಲಿ ತೊಂದರೆಯಾಗಬಾರದು ಎಂಬ ಉದ್ದೇಶ ದಿಂದ ಸ್ವಂತ ಖರ್ಚಿನಲ್ಲಿ ಕಳೆದ ವರ್ಷ ಸಂತೋಷ ಲಾಡ್ ಅವರು ಉಚಿತ ಸಂಚಾರಿ ಆರೋಗ್ಯ ಸೇವೆಯನ್ನು ಆರಂಭ ಮಾಡಿದರು.

ಯಾರಿಂದಲೂ ಯಾವ ಸಹಾಯವನ್ನು ಪಡೆದುಕೊಳ್ಳದೇ ಸ್ವತಃ ತಮ್ಮದೇಯಾದ ಪೌಂಡೇಶನ್ ನಿಂದ ಈ ಒಂದು ಯೋಜನೆಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಯಾರು ಆರಂಭ ಮಾಡದ ಈ ಒಂದು ಕೆಲಸವನ್ನು ಇವರು ಕ್ಷೇತ್ರದಲ್ಲಿ ಆರಂಭ ಮಾಡಿದ್ದು ಸಂತೋಷ ಲಾಡ್ ಅವರ ಕನಸಿನ ಈ ಒಂದು ಆರೋಗ್ಯ ಸೇವೆಗೆ ಸಧ್ಯ ವರ್ಷದ ಸಂಭ್ರಮ ನಾಲ್ಕು ಸಂಚಾರಿ ವಾಹನಗಳು ಕಾರ್ಯಾಚರಣೆ ಮಾಡುತ್ತಿದ್ದು ಕಲಘಟಗಿ-ಅಳ್ನಾವರ ಮತಕ್ಷೇತ್ರದ ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಗಾಗಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಕಳೆದ ವರ್ಷ ಆರಂಭಿಸಲಾದ ಉಚಿತ ಸಂಚಾರಿ ಆರೋಗ್ಯ ಸಹಾಯ ಹಸ್ತ ಸೇವೆಗೆ ಇಂದಿಗೆ ಭರ್ತಿ ಒಂದು ವರ್ಷದ ಸಂಭ್ರಮ.

ಈ ಸೇವೆಯಲ್ಲಿ ಈವರೆಗೆ ಬರೊಬ್ಬರಿ 1 ಲಕ್ಷ 70 ಸಾವಿರಕ್ಕೂ ಹೆಚ್ಚು ಜನರು ಲಾಭವನ್ನು ತಗೆದುಕೊಂಡಿದ್ದು ಕ್ಷೇತ್ರದ ಜನರಿಗೆ ಆರೋಗ್ಯ ಸೇವೆ ಒದಗಿಸಿರುವ ನೆಮ್ಮದಿ ಸಂತೋಷ್ ಲಾಡ್ ಮತ್ತು ಇದನ್ನು ನೋಡಿಕೊಳ್ಳುತ್ತಿರುವ ಆಪ್ತ ಕಾರ್ಯದರ್ಶಿ ಎನ್ ಎಮ್ ಹರಿಶಂಕರ್ ಮತ್ತು ಟೀಮ್ ನವರಿಗೆ ಸಲ್ಲುತ್ತದೆ.ಮತಕ್ಷೇತ್ರದ ಪ್ರತಿ ಗ್ರಾಮಗಳಿಗೂ ನಮ್ಮ ಸೇವೆ ತಲುಪಿದೆ.

ಈ ಸೇವೆ ಸರ್ಕಾರಕ್ಕೆ, ಇತರ ಸಂಘ ಸಂಸ್ಥೆಗಳಿಗೆ, ರಾಜಕೀಯ ನಾಯಕರಿಗೆ ಮಾದರಿಯಾಗಿದ್ದು ನಿಜಕ್ಕೂ ಹೆಮ್ಮೆಯ ವಿಷಯವಾಗಿದ್ದು ಈ ಎಲ್ಲಾ ಸೇವೆ ಸಾಧನೆ ಸಾಧ್ಯವಾಗಿದ್ದು ನಿಮ್ಮೆಲ್ಲರ ಆಶೀರ್ವಾದದಿಂದ ಮಾತ್ರ ಇಂತಹ ಸೇವೆ ಮಾಡಲು ಸ್ಫೂರ್ತಿ ತುಂಬಿದ ಪ್ರತಿಯೊಬ್ಬ ರಿಗೂ ನಾನು ಆಭಾರಿ ಎಂಬ ಮಾತನ್ನು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

ಕ್ಷೇತ್ರದಲ್ಲಿ ಕೋಟಿ ಕೋಟಿ ರೂಪಾಯಿ ಉಳಿತಾಯ ಮಾಡಿದ ಉಚಿತ ಸಂಚಾರಿ ಆರೋಗ್ಯ ಯೋಜನೆ

ಹೌದು ಕಳೆದ ವರ್ಷ ಆರಂಭಗೊಂಡ ಈ ಒಂದು ಯೋಜನೆ ಸಧ್ಯ ಕಲಘಟಗಿ ತಾಲ್ಲೂಕಿನ ತುಂಬೆಲ್ಲಾ ಸಾಕಷ್ಟು ಪ್ರಮಾಣದಲ್ಲಿ ಜನಪ್ರೀಯವಾಗಿದ್ದು ಕಳೆದೊಂದು ವರ್ಷದಲ್ಲಿ ಬರೊಬ್ಬರಿ ನಾಲ್ಕು ಕೋಟಿ ರೂಪಾಯಿಗಿಂ ತಲೂ ಹೆಚ್ಚು ಹಣವನ್ನು ಉಳಿತಾಯ ಮಾಡಿ ದಾಖಲೆ ಯನ್ನು ನಿರ್ಮಾಣ ಮಾಡಿದ್ದು ಈ ಒಂದು ಯೋಜನೆಗೆ ಸಲ್ಲುತ್ತದೆ.

ಸಾಮಾನ್ಯವಾಗಿ ಯಾರೇ ಒಬ್ಬರು ಸರ್ಕಾರಿ ಆಸ್ಪತ್ರೆ ಆಗಲಿ ಇಲ್ಲವೇ ಖಾಸಗಿ ಆಸ್ಪತ್ರಗೆ ಹೋದರೆ 300 ರೂಪಾಯಿ ಯಿಂದ 500 ರೂಪಾಯಿ ವರೆಗೆ ಖರ್ಚಾಗುತ್ತದೆ ಆದರೆ ಈ ಒಂದು ಉಚಿತ ಸಂಚಾರಿ ವಾಹನ ದಿಂದ ಇದೇಲ್ಲವೂ ಉಳಿತಾಯವಾಗಿದ್ದು ಹೀಗಾಗಿ ಈವರೆಗೆ ಕಳೆದೊಂದು ವರ್ಷದಲ್ಲಿ ಈರವಗೆ ಕ್ಷೇತ್ರದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ರೋಗಿಗಳನ್ನು ನೋಡಿದ್ದು ಹೀಗಾಗಿ ಉಚಿತವಾದ ವ್ಯವಸ್ಥೆಯಿಂದಾಗಿ ನಾಲ್ಕು ಕೋಟಿ ರೂಪಾಯಿ ಉಳಿತಾ ಯವಾಗಿದ್ದು ಇದೊಂದು ಈ ಒಂದು ಯೋಜನೆಯಿಂದಾಗಿ ಹೆಮ್ಮೆಯ ಸಂಗತಿಯಾಗಿದೆ.

ಪ್ರತಿ ತಿಂಗಳು 10 ಲಕ್ಷ ರೂಪಾಯಿ ಖರ್ಚು

ಹೌದು ಸಧ್ಯ ಸಂತೋಷ ಲಾಡ್ ಅವರು ಕ್ಷೇತ್ರದಲ್ಲಿ ನಾಲ್ಕು ವಾಹನಗಳ ಸೇವೆಯನ್ನು ನೀಡಿದ್ದು ಇದರಲ್ಲಿ ಎಲ್ಲಾ ರೀತಿಯ ಪ್ರಾಥಮಿಕ ವೈಧ್ಯಕೀಯ ಸೌಲಭ್ಯ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸಿದ್ದು ಯಾರಿಂದಲೂ ಯಾವ ರೀತಿಯಲ್ಲೂ ಒಂದೇ ಒಂದು ಪೈಸೆಯನ್ನು ತಗೆದುಕೊಳ್ಳದೇ ಉಚಿತವಾಗಿ ಸೇವೆಯನ್ನು ನೀಡಲಾಗುತ್ತಿದ್ದು ವೈಧ್ಯರು ನರ್ಸ್ ಲ್ಯಾಬ್ ಹೀಗೆ ವ್ಯವಸ್ಥೆ ಇದರಲ್ಲಿದ್ದು ಪ್ರತಿ ತಿಂಗಳು ಬರೊಬ್ಬರಿ 10 ಲಕ್ಷ ರೂಪಾಯಿ ಖರ್ಚಾಗುತ್ತಿದೆ.

ಸಂಚಾರಿ ವಾಹನದಲ್ಲಿ ಏನೇನಿದೆ

ಈ ಒಂದು ಸಂಚಾರಿ ವಾಹನಗಳಲ್ಲಿ ವೈಧ್ಯರು ನರ್ಸ್ ಸೇರಿದಂತೆ ಲ್ಯಾಬ್ ಟೆಕ್ನಿಸಿಯನ್ ಸೇರಿದಂತೆ ನಾಲ್ಕು ಜನರಿಂದು ಜ್ವರ ನೆಗಡಿ,ಕೆಮ್ಮು ಚರ್ಮ ರೋಗ ರಕ್ತ ತಪಾಸಣೆ,ಬಿಪಿ ಶೂಗರ್ ಸೇರಿದಂತೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಸ್ಥಳದಲ್ಲೇ ಚಿಕಿತ್ಸೆ ಸಿಗಲಿದ್ದು ವೈಧ್ಯರಿಂದ ಮಾರ್ಗದರ್ಶನ ಉಚಿತವಾಗಿ ಮಾತ್ರೆಗಳನ್ನು ನೀಡಲಾಗುತ್ತದೆ

ಮಾಜಿ ಸಚಿವ ಸಂತೋಷ ಲಾಡ್ ಕನಸಿನ ಈ ಒಂದು ಯೋಜನೆಗೆ ಈಗ ವರ್ಷದ ಸಂಭ್ರಮ ಆರಂಭ ಮಾಡಿದ ಆರಂಭದಲ್ಲಿ ಈ ಒಂದು ಯೋಜನೆ ಕುರಿತಂತೆ ಕೆಲವರು ಅದರಲ್ಲೂ ಕಾಣದ ಕೈಗಳು ಹೆಸರನ್ನು ಹಾಳು ಮಾಡಲು ಪ್ರಯತ್ನ ಮಾಡಿದರು ಆದರೂ ಅದು ಸಾಧ್ಯವಾಗಲಿಲ್ಲ ಸದಾ ಕ್ಷೇತ್ರದಲ್ಲಿ ಒಳ್ಳೇಯದನ್ನು ಮಾಡಿಕೊಂಡು ಮಾಡುತ್ತಾ ಬರುತ್ತಿರುವ ಸಂತೋಷ ಲಾಡ್ ಮತ್ತು ಟೀಮ್ ನವರ ಉಚಿತ ಸಂಚಾರಿ ಆರೋಗ್ಯ ಸೇವೆ ಸಧ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನಪ್ರೀಯವಾಗಿದ್ದು ರಾಜ್ಯದಲ್ಲಿಯೇ ಜನಪ್ರತಿಯೊಬ್ಬರು ಕ್ಷೇತ್ರದಲ್ಲಿ ಜನರಿಗೆ ಬೇಕಾಗಿರುವ ಈ ಒಂದು ಸೇವೆಯನ್ನು ನೀಡಿ ಸರ್ಕಾರ ಗಳಿಗೆ ರಾಜಕಾರಣಿಗಳಿಗೆ ರಾಜ್ಯಕ್ಕೆ ಮಾದರಿಯಾಗಿದ್ದಾರೆ

ಮಾಜಿ ಸಚಿವ ಸಂತೋಷ ಲಾಡ್ ಮತ್ತು ಟೀಮ್ ನವರು ಇನ್ನೂ ವರ್ಷದಲ್ಲಿ ಈ ಒಂದು ಯೋಜನೆಯಿಂದಾಗಿ ಜನರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ನಾವು ಪ್ರೀತಿ ಯಿಂದ ನೀಡಿದ್ದು ಇದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೆಂಬಲ ಸ್ಬಂದನೆ ಸಿಕ್ಕಿದ್ದು ಈವರೆಗೆ ಕಳೆದೊಂದು ವರ್ಷದಲ್ಲಿ ಬರೊಬ್ಬರಿ 1 ಲಕ್ಷಕ್ಕೂ ಹೆಚ್ಚು ರೋಗಿಗಳನ್ನು ನೋಡಿ ಅವರಿಗೆ ಆರೋಗ್ಯ ಸೇವೆ ನೀಡಿದ್ದು ತುಂಬಾ ಸಂತೋಷದ ವಿಚಾರವಾಗಿದ್ದು ರಾಜ್ಯಕ್ಕೆ ಮಾದರಿಯಾಗಿರುವ ಈ ಒಂದು ಸೇವೆಗೆ ವರ್ಷದ ಸಂಭ್ರಮವಾಗಿದ್ದು ಖುಷಿಯ ವಿಚಾರವಾ ಗಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಆಪ್ತ ಕಾರ್ಯದರ್ಶಿ ಮತ್ತು ಈ ಒಂದು ಸೇವೆಯನ್ನು ನೋಡಿ ಕೊಳ್ಳುತ್ತಿರುವ ಎನ್ ಎಮ್ ಹರಿಶಂಕರ್ ಅವರು ಹೇಳಿದ್ದಾರೆ.

ವರದಿ – ಸುದ್ದಿ ಸಂತೆ ಟೀಮ್


Google News

 

 

WhatsApp Group Join Now
Telegram Group Join Now
Suddi Sante Desk