ಕಲಘಟಗಿ –
ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳ ಮೂಲಕ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗುತ್ತಿ ರುವ ಮಾಜಿ ಸಚಿವ ಸಂತೋಷ ಲಾಡ್ ಮತ್ತೊಮ್ಮೆ ಮಾನವೀಯತೆ ಮೆರೆತಿದ್ದಾರೆ.ಹೌದು ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಳೆಯಿಂದಾಗಿ ಹುಬ್ಬಳ್ಳಿ ಕಾರವಾರ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಾಟಿಯ ಬಳಿ ನಿರಂತರ ಮಳೆಯಿಂದ ಬೆಟ್ಟಗಳಿಂದ ಹರಿದು ಬರುವ ನೀರಿನ ಪ್ರಮಾಣ ಜಾಸ್ತಿಯಾಗಿ ಸಂಚಾರ ಸ್ಥಗಿತಗೊಂಡಿದೆ. ಇದರಿಂ ದಾಗಿ ಸಾರ್ವಜನಿಕರಿಗೆ ಹಸಿವನ್ನು ನೀಗಿಸಿದ್ದಾರೆ.

ಹೌದು ಕಳೆದ ಎರಡು ಮೂರು ದಿನಗಳಿಂದ ಕಲಘಟಗಿಯ ಧಾರವಾಡ ಕ್ರಾಸ್ ಬಳಿ ಸುಮಾರು 500 ಕ್ಕೂ ಹೆಚ್ಚಿನ ಲಾರಿಗಳು ನಿಂತಿವೆ.ಆ ಲಾರಿಗಳ ಚಾಲಕ ಹಾಗೂ ಕ್ಲೀನರ್ ಗಳಿಗೆ ಸರಿಯಾದ ಊಟ ದ ವ್ಯವಸ್ಥೆ ಇಲ್ಲದೇ ಪರದಾಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ನಮ್ಮೆಲ್ಲರ ಹೆಮ್ಮೆಯ ನಾಯಕ ಹಾಗೂ ಮಾಜಿ ಕ್ಯಾಬಿನೆಟ್ ಸಚಿವ ಶ್ರೀ ಸಂತೋಷ್ ಲಾಡ್ ಅವರು ಸುಮಾರು ಒಂದು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿಸಹೃದಯತೆ ಮೆರೆದಿದ್ದಾರೆ.

ಕಷ್ಟದಲ್ಲಿರುವವರು ಯಾರೇ ಆಗಲಿ ಅವರಿಗೆ ಕೂಡಲೇ ಸಹಾಯಕ್ಕೆ ಧಾವಿಸುವುದು ಸಂತೋಷ್ ಲಾಡ್ ಅವರ ಹುಟ್ಟುಗುಣ ಹೀಗಾಗಿ ಇಂತಹ ಮಾನವೀಯ ಮೌಲ್ಯಗಳಿಂದಲೇ ಸಂತೋಷ್ ಲಾಡ್ ಅವರು ಇಂದು ಲಕ್ಷಾಂತರ ಜನರ ಹೃದಯ ಗೆದ್ದಿರುವುದೊಂದಿಗೆ ಈಗ ಮಳೆಯಿಂದಾಗಿ ಪರದಾಡುತ್ತಿರುವ ಜನತೆಗೆ ನೆರವಾಗಿದ್ದಾರೆ
