ಧಾರವಾಡ
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾ ಆಗಿದೆ.ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯದಿಂದ ಆದೇಶವಾಗಿದೆ.ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೊಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ, ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನು ಅರ್ಜಿಯನ್ನು ವಜಾ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಳೆದ ನವೆಂಬರ್ 27 ರಂದು ವಿನಯ ಕುಲಕರ್ಣಿ ಪರ ವಕೀಲರು ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯಕ್ಕೆ ನಮ್ಮ ಕಕ್ಷಿದಾರರಿಗೆ ಜಾಮೀನು ನೀಡಲು ಕೋರಿ ಅರ್ಜಿ ಸಲ್ಲಿಸಿದರು. ಅಂದು ವಿಚಾರಣೆ ನಡೆಸಿದ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಮೂಂದುಡುತ್ತಲೆ ಬಂದಿತ್ತು. ಆದರೆ ಕಳೆದ ಡಿಸೆಂಬರ್ 7 ರಂದು ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯದ ನ್ಯಾಯಾಧೀಶರು, ಅಂದು ಜಾಮೀನು ಅರ್ಜಿಯನ್ನು ಸುಧೀರ್ಘ ವಿಚಾರಣೆ ನಡೆಸಿದರು. ಒಂದೇ ದಿನ ಎರಡು ಬಾರಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಇಂದು ಆದೇಶ ಪ್ರಕಟಿಸುವುದಾಗಿ ಆದೇಶ ಹೋರಡಿಸಿದ್ದರು.
ಇಂದು ಸಂಜೆಯ ನಂತರ ಜಾಮೀನು ಆರ್ಜಿ ವಿಚಾರಣೆ ಆದೇಶವನ್ನು ಕೈಗೆತ್ತಿಕೊಂಡ ನ್ಯಾಯಾಧೀಶರ ಮಾಜಿ ಸಚಿವ ವಿನಯ ಕುರ್ಣಿಯವರ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೋರಡಿಸಿದ್ದಾರೆ. ಇನ್ನೂ ನ್ಯಾಯಾಧೀಶರ ಆದೇಶದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ವಿನಯ ಅಭಿಮಾನಿಗಳಲ್ಲಿ ಬಾರಿ ನಿರಾಸೆಯಾಗಿದ್ದಂತಾಗಿದೆ.