ಧಾರವಾಡ – ವಿದ್ಯುತ್ ಕಂಬಕ್ಕೆ ಬುಲೆರೊ ಕಾರೊಂದು ಡಿಕ್ಕಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಟೋಲ್ ನಾಕಾ ಬಳಿ ಈ ಒಂದು ಅಪಘಾತವಾಗಿದೆ. ನಿನ್ನೆ ಗಣ್ಯರೊಬ್ಬರ ಭದ್ರತಾ ಕರ್ತವ್ಯಕ್ಕೆ ತೆರಳಿದ್ದ ಧಾರವಾಡದ ಅಬಕಾರಿ ಇಲಾಖೆಯ ಸಿಬ್ಬಂದಿ ಗಳ ಕಾರು ಇದಾಗಿದೆ.
ಕರ್ತವ್ಯ ಮುಗಿಸಿಕೊಂಡು ಮರಳಿ ಹುಬ್ಬಳ್ಳಿಯಿಂದ ಧಾರವಾಡಗೆ ಬರುವಾಗ ಈ ಒಂದು ಅಪಘಾತವಾಗಿದೆ. BRTS ರಸ್ತೆಯಲ್ಲಿ ಬರುವಾಗ ಟೋಲ್ ನಾಕಾ ಬಳಿ ಅಪಘಾತವಾಗಿದೆ. ರಸ್ತೆಯ ಪಕ್ಕದಲ್ಲಿನ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ.
ಘಟಕನೆಯಲ್ಲಿ ಕಾರು ಸಂಪೂರ್ಣವಾಗಿ ಪಲ್ಟಿ ಯಾಗಿದ್ದು ವಾಹನದಲ್ಲಿದ್ದ ನಾಲ್ಕೈದು ಜನ ಸಿಬ್ಬಂದಿ ಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನೂ ವಿಷಯ ತಿಳಿಸ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು.
ಸಮಯ ಚನ್ನಾಗಿದ್ದು ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಕರಣ ದಾಖಲು ಮಾಡಿಕೊಂಡಿರುವ ಸಂಚಾರಿ ಪೊಲೀಸರು ಅಪಘಾತಕ್ಕೆ ಕಾರಣವನ್ನು ಪತ್ತೆ ಹಚ್ಚುತ್ತಿದ್ದಾರೆ.