ಹುಬ್ಬಳ್ಳಿ –
2021-22 ನೇ ಸಾಲಿನಲ್ಲಿ ಪದವಿ,ಡಿಪ್ಲೋಮಾ, ಸ್ನಾತಕೋ ತ್ತರ,ವೃತ್ತಿಪರ ಹಾಗೂ ಸಂಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಈಗಾಗಲೇ ಪಾಸುಗಳನ್ನು ಪಡೆದಿರುವ ವಿದ್ಯಾರ್ಥಿಗಳ ಬಸ್ ಪಾಸ್ ಮಾನ್ಯತಾ ಅವಧಿ ಜೂ. 30 ರಂದು ಮುಕ್ತಾಯಗೊಂಡಿರುತ್ತದೆ.ತರಗತಿಗಳು ಹಾಗೂ ಪರೀಕ್ಷೆಗಳು ಬಾಕಿ ಇರುವದರಿಂದ ಬಸ್ ಪಾಸ್ ಅವಧಿ ಯನ್ನು ವಿಸ್ತರಿಸಲು ವಿದ್ಯಾರ್ಥಿಗಳು ಕಾಲಾವಕಾಶ ನೀಡು ವಂತೆ ಕೋರಿದ್ದರು.ಸಂಸ್ಥೆಯ ನಿಯಮಾನುಸಾರ ನಿಗದಿತ ಮೊತ್ತ ಆಕರಣೆಯೊಂದಿಗೆ ಒಂದು ಹಾಗೂ ಎರಡು ತಿಂಗಳು ಅವಧಿಯೊಂದಿಗೆ ಬಸ್ ಪಾಸುಗಳನ್ನು ವಿಸ್ತರಿಸಿ ಕೊಳ್ಳಬಹುದು.
ಜು.10 ರೊಳಗಾಗಿ ಬಸ್ ಪಾಸುಗಳನ್ನು ನವೀಕರಿಸಿಕೊ ಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.ಈ ಹಿಂದೆ ಜು.3ರವರೆಗೆ ಅವಕಾಶ ನೀಡಲಾಗಿತ್ತು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.