ಪರೀಕ್ಷೆ ಬರೆಯವಾಗ ಸಿಕ್ಕಿಬಿದ್ದ ನಕಲಿ ವಿದ್ಯಾರ್ಥಿಗಳು – ಬೇರೆ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದವರು ಸಿಕ್ಕಿಬಿದ್ದರು…..

Suddi Sante Desk

ಚಿಕ್ಕೋಡಿ –

ಇಂದಿನಿಂದ ರಾಜ್ಯಾಧ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಗಳು ಆರಂಭಗೊಂಡಿದ್ದು ಈ ಮಧ್ಯೆ ಶಾಂತಯುತವಾಗಿ ಮೊದಲನೇಯ ದಿನದ ಪರೀಕ್ಷೆ ಮುಗಿದಿದ್ದು ಇನ್ನೂ ಇತ್ತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬೇರೆ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.ಹೌದು ಮೊದಲನೇಯ ದಿನ ಪರೀಕ್ಷೆ ಆರಂಭದ ಮೊದಲ ದಿನವೇ 6 ಮಂದಿ ನಕಲಿ ವಿದ್ಯಾರ್ಥಿ ಗಳು ನಗರದಲ್ಲಿ ಸಿಕ್ಕಿಬಿದ್ದಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ. ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದ ಈ 6 ಯುವಕರು ಬೇರೆ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆ ಬರೆಯುತ್ತಿದ್ದರು ಖಚಿತವಾದ ಮಾಹಿತಿಯನ್ನು ಪಡೆದು ಕೊಂಡ ಪೊಲೀಸರು ಮೇಲ್ವಿಚಾರಕರಿಗೆ ತಿಳಿಸಿದ್ದು ಪರಿಶೀಲನೆ ಮಾಡಿದಾಗ ನಕಲಿ ಎಂಬುದು ಗೊತ್ತಾಗಿದೆ ಕೂಡಲೇ ಆರು ಜನರನ್ನು ಪೊಲೀಸರು ವಶಕ್ಕೆ ತಗೆದು ಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.