ಕೊಡಗು –
ಅಡುಗೆ ಸಹಾಯಕರ ನೇಮಕಕ್ಕೆ ಹಣದ ಬೇಡಿಕೆ ಇಟ್ಟಿದ್ದ ಹೆಡ್ ಮಾಸ್ಟರ್ ರೊಬ್ಬರು ಲೋಕಾ ಯುಕ್ತ ಬಲೆಗೆ ಬಿದ್ದ ಘಟನೆ ಕೊಡಗಿನಲ್ಲಿ ನಡೆದಿದೆ ಹೌದು ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿದ್ದು ಕೊಡಗಿನ ವಿರಾಜ ಪೇಟೆ ತಾಲ್ಲೂಕಿನ ಮಾಲ್ದಾರೆಯಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ
ಮಾಲ್ದಾರೆ ದಿಡ್ಡಳ್ಳಿ ಆಶ್ರಮ ಶಾಲೆಯ ಸಿದ್ಧಲಿಂಗ ಶೇಟ್ಟಿ ಲೋಕಾಬಲೆಗೆ ಬಿದ್ದ ಹೆಡ್ ಮಾಸ್ಟರ್ ಆಗಿ ದ್ದಾರೆ.ಅತಿಥಿ ಶಿಕ್ಷಕರು ಹಾಗೂ ಅಡುಗೆ ಸಹಾ ಯಕರ ನೇಮಕಕ್ಕೆ ಹಣದ ಬೇಡಿಕೆ ಇಟ್ಟಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಲೋಕಾ ಅಧಿಕಾರಿಗಳು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
DYSP ಪ್ರಕಾಶ್ ಕೆ.ಸಿ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ವಶಕ್ಕೆ ತೆಗೆದು ಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆಯನ್ನು ಮಾಡ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೊಡಗು……