ಸುಳ್ಳ –
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿಗೆ ಸಂಪೂರ್ಣ ಆಹುತಿಯಾದ ಹುಬ್ಬಳ್ಳಿಯ ಸುಳ್ಳ ಗ್ರಾಮದ ಎರಡು ಕುಟುಂಬಗಳಿಗೆ ಗ್ರಾಮಸ್ಧರು ನೆರವಾಗಿದ್ದಾರೆ.
ವಿದ್ಯುತ್ ಅವಘಡದಿಂದ ಎರಡು ಕುಟುಂಬಗಳ ಎರಡು ಮನೆಗಳು ಸುಟ್ಟು ಕರಕಲಾಗಿದ್ದು ಮನೆಯಲ್ಲಿನ ಪ್ರತಿಯೊಂದು ವಸ್ತುಗಳು ಕೂಡಾ ಸುಟ್ಟು ಕರಕಲಾಗಿದ್ದವು.
ಮಲಗಿಕೊಂಡವರು ಏಕಾಎಕಿಯಾಗಿ ಹೊರಗೆ ಬಂದು ಜೀವವನ್ನು ಉಳಿಸಿಕೊಂಡಿದ್ದೇ ಹೆಚ್ಚಾಗಿದ್ದು ಹೀಗಾಗಿ ಜೀವವೊಂದನ್ನು ಬಿಟ್ಟು ಎಲ್ಲಾ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದವು.
ಇದ್ದ ಮನೆ ಬಟ್ಟೆ ಹೀಗೆ ಎಲ್ಲಾ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿ ವಾಲಿ ಎಂಬುವರ ಎರಡು ಕುಟುಂಬಗಳು ಅಕ್ಷರಶಃ ಆಸರೆಯಿಲ್ಲದೇ ಬೀದಿ ಪಾಲಾಗಿದ್ದು ಸುಳ್ಳ ಗ್ರಾಮದಲ್ಲಿ ಕಂಡು ಬಂದಿತು.
ಹೀಗೆ ಆಗಿದೆ ಎಂದುಕೊಂಡು ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳದೇ ಸುಳ್ಳ ಗ್ರಾಮಸ್ಥರು ಅದರಲ್ಲೂ ಗ್ರಾಮದ ಹಿರಿಯರು ಬೀದಿ ಪಾಲಾದ ಶಿವಬಸಪ್ಪ ವಾಲಿ ಕಲ್ಲಪ್ಪ ವಾಲಿ ಎರಡು ಕುಟುಂಬಗಳಿಗೆ ಏನಾದರೂ ಮಾಡಿ ಅಲ್ಪ ಸ್ವಲ್ಪವಾದರೂ ಅವರಿಗೆ ನೆರವಾಗಬೇಕು ಎಂದುಕೊಂಡು ಎನ್ನುತ್ತಾ ಮಾನವೀಯತೆಯ ನೆರವಿನ ಸಹಾಯಸ್ತವನ್ನು ಚಾಚಿದ್ದಾರೆ.
ಹೌದು ಉಟ್ಟ ಬಟ್ಟೆಯನ್ನು ಬಿಟ್ಟರೇ ಮತ್ತೇನಿಲ್ಲದೇ ಬೀದಿಪಾಲಾದ ಎರಡು ಕುಟುಂಬಗಳಿಗೆ ಗ್ರಾಮದ ಹಿರಿಯರು ಕೈ ಕೈ ಜೋಡಿಸಿ ನೆರವನ್ನು ನೀಡಿದ್ದಾರೆ. ಗ್ರಾಮದ ಹಿರಿಯರು ಯುವಕರು ಮಂಜುನಾಥ ಬಡಿಗೇರ ನೇತ್ರತ್ವದಲ್ಲಿ ಎಲ್ಲರೂ ಹನಿ ಹನಿ ರೂಪದಲ್ಲಿ ಹಣವನ್ನು ಕೂಡಿಸಿ ಎರಡು ಕುಟುಂಬಗಳಿಗೆ ಅವಶ್ಯಕವಾಗಿ ಸಧ್ಯ ಬೇಕಾದ ಬಟ್ಟೆ.ದಿನಬಳಕೆಯ ಪಾತ್ರೆ,ಹಾಸಿಗೆ ಅಡುಗೆ ದಿನಸಿಗಳು,ಹೀಗೆ ಸಧ್ಯ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಗ್ರಾಮದ ಹಿರಿಯರು ಯುವಕರು ಸೇರಿಕೊಂಡು ತಗೆದುಕೊಂಡು ಬಂದು ಕುಟುಂಬಗಳಿಗೆ ನೀಡಿದ್ದಾರೆ.
ಗ್ರಾಮದ ಹೊಳೆಪ್ಪ ಪೂಜಾರ, ಮಂಜುನಾಥ್ ಲಕ್ಷ್ಮೇಶ್ವರ, ಕಲ್ಲಪ್ಪ ಜುಂಜಣ್ಣವರ, ಮುದಕಣ್ಣ ಕಂಕೋಳ್ಳಿ, ನಾಗರಾಜ್ ಒಂಟಿ, ಮಂಜುನಾಥ ಬಡಿಗೇರ ಸೇರಿದಂತೆ ಗ್ರಾಮದ ಎಲ್ಲರೂ ಕೈ ಕೈ ಜೋಡಿಸಿ ಬೀದಿಪಾಲಾಗಿದ್ದ ಎರಡು ಕುಟುಂಬಗಳಿಗೆ ನೆರವಿನ ಸಹಾಯಹಸ್ತವನ್ನು ಚಾಚಿದ್ದಾರೆ.
ಜೊತೆಗೆ ಅವಶ್ಯಕವಾಗಿ ಬೇಕಾಗಿರುವ ಎಲ್ಲಾ ವಸ್ತುಗಳನ್ನು ನೀಡಿ ಗ್ರಾಮಸ್ಥರು ನಾವು ಮನಸ್ಸು ಮಾಡಿದರೆ ಏನಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇದರೊಂದಿಗೆ ವಾಲಿ ಕುಟುಂಬಗಳಿಗೆ ಸಧ್ಯ ಗ್ರಾಮಸ್ಥರು ನೆರವಾಗಿದ್ದು ಬರುವ ದಿನಗಳಲ್ಲಿ ಗ್ರಾಮ ಪಂಚಾಯತ ವತಿಯಿಂದ ದೊಡ್ಡ ಪ್ರಮಾಣದಲ್ಲಿ
ನೆರವನ್ನು ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಇನ್ನೂ ಇತ್ತ ಮಾಜಿ ಶಾಸಕ ಕೊನರಡ್ಡಿ ,ಹಾಲಿ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ ಗ್ರಾಮಕ್ಕೆ ತೆರಳಿ ವೀಕ್ಷಣೆ ಮಾಡಿದರು.
ಇವರು ಕೂಡಾ ಎರಡು ಕುಟುಂಬಗಳಿಗೆ ನೆರವು ನೀಡಿದ್ದಾರೆ. ಅಲ್ಲದೆ ಈ ಕುರಿತು ಮತ್ತಷ್ಟು ರಾಜ್ಯ ಸರ್ಕಾರದಿಂದ ಏನಾದರೂ ಸಹಾಯ ಮಾಡುವ ಭರವಸೆ ನೀಡಿದ್ದಾರೆ.