ಬೆಳಗಾವಿ –
ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ವಿನಯ ಕುಲಕರ್ಣಿ ಅವರನ್ನು ಕುಟುಂಬದವರು ಭೇಟಿ ಮಾಡಿದರು. ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಭೇಟಿ ನೀಡಿದರು

ಮಾಜಿ ಸಚಿವ ವಿನಯ ಕುಲಕರ್ಣಿಗೆ ನ್ಯಾಯಾಂಗ ಬಂಧನ ಇರುವ ಹಿನ್ನಲೆಯಲ್ಲಿ ಜೈಲಿಗೆ ಭೇಟಿ ನೀಡಿದರು ಕುಟುಂಬದವರು.

ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪದಲ್ಲಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಇದ್ದಾರೆ. ಈ ಒಂದು ಹಿನ್ನೆಲೆಯಲ್ಲಿ ಇಂದು ಕಾರಾಗೃಹಕ್ಕೆ ತೆರಳಿ ಭೇಟಿ ನೀಡಿದರು.

ಭೇಟಿಗೆ ಅವಕಾಶ ಕೇಳಿ ನ್ಯಾಯಾಲಯಕ್ಕೆ ಕುಟುಂಬದವರು ಅರ್ಜಿ ಸಲ್ಲಿಸಿದ್ದರು.ಅನುಮತಿ ನೀಡಿದ ಹಿನ್ನಲೆಯಲ್ಲಿ ಈ ಒಂದು ಹಿನ್ನೆಲೆಯಲ್ಲಿ ಕೇವಲ ಇಬ್ಬರಿಗೆ ಮಾತ್ರ ಪ್ರವೇಶವನ್ನು ಜೈಲಿನ ಅಧಿಕಾರಿಗಳು ನೀಡಿದ್ದರು.
ಕಳೆದ ಡಿಸೆಂಬರ್ 10 ರಂದು ವಿನಯ ಕುಲಕರ್ಣಿ ಭೇಟಿ ಮಾಡಿದ್ದ ಕುಟುಂಬಸ್ಥರು.ಮತ್ತೊಮ್ಮೆ ಇಂದು ಎರಡನೇ ಬಾರಿಗೆ ಭೇಟಿ ಮಾಡಿದರು.ಒಂದು ಗಂಟೆಗಳ ಕಾಲ ಭೇಟಿಗೆ ಅವಕಾಶವನ್ನು ನ್ಯಾಯಾಲಯ ನೀಡಿತ್ತು ಹೀಗಾಗಿ 4 ರಿಂದ 5 ಘಂಟೆ ವರೆಗೆ ಭೇಟಿ ಮಾಡಿದರು.

ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ,ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಇವರೊಂದಿಗೆ ಇನ್ನಿತರ ಕುಟುಂಬದ ಸದಸ್ಯರಿದ್ದರು.