ಧಾರವಾಡ –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನವಾಗಿ ಎರಡು ತಿಂಗಳು ಕಳೆದಿವೆ. ಬಂಧನವಾಗಿರುವ ವಿನಯ ಕುಲಕರ್ಣಿ ಗೆ ಜಾಮೀನು ದೊರೆಯಲಿ ಎಂದು ಧಾರವಾಡದಲ್ಲಿ ಕಮಲಾಪುರ ನಿವಾಸಿಗಳು ಮತ್ತು ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪೂಜೆ ಸಲ್ಲಿಸಿದರು.

ವಿನಯ ಕುಲಕರ್ಣಿ ಅವರಿಗೆ ಕೂಡಲೆ ನ್ಯಾಯಾಲಯದಿಂದ ಬೆಲ್ ಸಿಗಬೇಕು ಎಂದು ಧಾರವಾಡದ ಕಮಲಾಪುರದ ಶ್ರೀ ಪತ್ರಪ್ಪಜ್ಜನ ಗುಡಿ ಯಲ್ಲಿ ಪೂಜೆಯನ್ನು ಮಾಡಲಾಯಿತು.

ಒಂದು ಘಂಟೆಗಳ ಕಾಲ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಂಧನವಾಗಿರುವ ಮಾಜಿ ಸಚಿವರಾದ ವಿನಯ ಕುಲಕರ್ಣಿ ಅವರಿಗೆ ಜಾಮೀನು ಸಿಗಲಿ ಎಂದು ಪ್ರಾರ್ಥಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಮುತ್ತು ಬೆಳ್ಳಕ್ಕಿ, ಸಿದ್ದಪ್ಪ ಸಪೂರಿ,ಚೀನಿ ಬಸು,ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಇನ್ನೂ ಇಂದು ಕೂಡಾ ಮದಿಹಾಳದ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಗಣ ಹೋಮವನ್ನು ಮಾಡಲಾಯಿತು.

ಗೌರಮ್ಮ ನಾಡಗೌಡರ ನಾರಾಯಣ ಸುಳ್ಳದ,ಬಸು ಜಾಧವ,ಹನಮಂತಪ್ಪ ಗಾಯಕವಾಡ,ಸತೀಶ್ ತುರಮರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇನ್ನೂ ನಾಳೆ ಕೂಡಾ ಪ್ಯಾಟಿ ವೀರಭದ್ರೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.