ಹುಬ್ಬಳ್ಳಿ –
ಸಾಲ ಬಾಧೆ ಯಿಂದ ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ತಿರುಮಲ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹಾದೇವಗೌಡ ಹಿರೇಗೌಡ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾರೆ.

ಬೆಳೆ ಸಾಲ ಅಂತಾ ಕೆವಿಜಿ ಬ್ಯಾಂಕ್ ನಲ್ಲಿ 50 ಸಾವಿರ ಕೈಗಡ ಸಾಲದ ರೂಪದಲ್ಲಿ ಒಂದು ಲಕ್ಷ ಹಾಗೇ ಸಂಘದಲ್ಲಿ ಮೂರು ಲಕ್ಷ ರೂಪಾಯಿ ಹೀಗೆ ಸಾಲ ಮಾಡಿದ್ದು ಒಂದೂವರೆ ಎಕರೆ ಭೂಮಿ ಇದ್ದಿದ್ದು ಸಾಲ ಬಾಧೆ ಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾ ದರು. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ