ಕೊಡಗು –
ಅನ್ನದಾತರ ಬೆನ್ನಿಗೆ ನಿಲ್ಲಬೇಕಾದ ಕೃಷಿ ಸಚಿವರು ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.ಮೊದಲ ಬಾರಿಗೆ ಕೃಷಿ ಸಚಿವರಾಗಿ ರೈತರಿಗೆ ಆತ್ಮಸ್ಥೈರ್ಯ ತುಂಬ ಬೇಕಿದ್ದ ಸಚಿವ ಬಿ ಸಿ ಪಾಟೀಲ್ ರ ರೈತರನ್ನು ಅವಮಾನ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳೊ ರೈತರು ಹೇಡಿಗಳು ಅನ್ನೋ ಪದ ಇದೀಗ ಚರ್ಚೆಗೆ ಗ್ರಾಸವಾಗಿದ್ರೆ.
ತನ್ನ ತಪ್ಪು ತಿದ್ದಿಕೊಳ್ಳದೆ ಮತ್ತದೇ ಹೇಳಿಕೆಯನ್ನು ಕೃಷಿ ಸಚವರು ಮಾತನಾಡಿ ಸಮರ್ಥನೆ ಮಾಡಿಕೊಂಡು ಬೇಜವಬ್ದಾರಿ ಮೆರೆದಿದ್ದಾರೆ.ಹೌದು ವೇದಿಕೆಯ ಮೇಲೆ ಕೊಡಗಿನ ವಡಿಕತ್ತಿ ಹಿಡಿದು ಪೋಜ್ ಕೊಡುತ್ತಾ. ಮೈಕ್ ಮುಂದೆ ರೈತ್ರ ಬಗ್ಗೆ ಬೇಜವಾಬ್ದಾರಿತನದ ಹೇಳಿಕೆಯನ್ನು ನೀಡಿ ಮತ್ತೊಮ್ಮೆ ರೈತರ ಆಕ್ರೋಶಕ್ಕೇ ಗುರಿಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತ್ರು ಹೇಡಿಗಳು ಎಂದು ಬಿ.ಸಿ.ಪಾಟೀಲ್ ಬಾಯಿಯಿಂದ ಬಂದ ಬೇಜವಬ್ದಾರಿ ಮಾತಾಗಿದೆ.ರೈತರಿಗೆ ಬೆನ್ನೆಲುಬಾಗಿ ನಿಂತು, ರೈತರ ಕಷ್ಟಗಳಿಗೆ ಸ್ಪಂದಿಸಬೇಕಿದ್ದ ಈ ಸಚಿವ್ರೇ ಹೇಡಿ ಅನ್ನೋ ಪದ ಬಳಕೆ ಮಾಡಿದ್ದು ಅನ್ನದಾತರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ಅಂದಹಾಗೆ ಸಚಿವ ಬಿ.ಸಿ. ಪಾಟೀಲ್ ಹೇಳಿರೋದು ಏನೂ…? ಅನ್ನೋದನ್ನ ನೀವು ಒಮ್ಮೆ ಕೇಳಿ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಬಿದಿರು ಸಂಪನ್ಮೂಲ ಕೇಂದ್ರದ ಉದ್ಘಾಟನೆ ಕಾರ್ಯಕ್ರಮಕ್ಕೆ ಇಂದು ಅರಣ್ಯ ಸಚಿವ ಆನಂದ್ ಸಿಂಗ್ ಜೊತೆ ಪೊನ್ನಂಪೇಟೆಗೆ ಬಿ.ಸಿ. ಪಾಟೀಲ್ ಆಗಮಿಸಿದ್ರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಸಿ. ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳೊ ರೈತರು ಹೇಡಿಗಳು ಎಂದ್ರು. ಯಾವಾಗ ಪಾಟೀಲ್ ಹೇಳಿಕೆ ವಿವಾದ ಸುತ್ತಿಕೊಳ್ತೊ ಅದಾಗ್ಲೇ ವೇದಿಕೆಯಿಂದ ಕಾರ್ಯಕ್ರಮ ಮುಗಿಸಿ ಕೆಳಗೆ ಇಳಿದ ಬಳಿಕವೂ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ್ರು. ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು ಅಂತಾ ನಾನು ಹೇಳುತ್ತೇನೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು.ಇದ್ದು ಸಮಸ್ಯೆ ಬಗೆಹರಿಸಿ ಎದ್ದು ನಿಲ್ಲುವ ಕೆಲಸ ಮಾಡಬೇಕು. ಮಂಡ್ಯದ ಜಿಲ್ಲೆಯ ಮಡುವಿನ ಕೋಡಿ ಗ್ರಾಮದ ರೈತ ಮಹಿಳೆ ಲಕ್ಷ್ಮೀದೇವಮ್ಮ 6.5 ಎಕರೆ ಭೂಮಿಯಲ್ಲಿ ಸಾವಯುವ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವ್ರ ಮಾದರಿಯನ್ನು ಅನುಸರಿಸಬೇಕು ಎಂದ್ರು.ಇನ್ನೂ ಕಾರ್ಯಕ್ರಮದಲ್ಲೇ ಇದ್ದ ಕೊಡಗು ಜಿಲ್ಲೆಯ ರೈತರು ಕೂಡ ಬಿ.ಸಿ.ಪಾಟೀಲ್ ಹೇಳಿಕೆಯನ್ನು ಖಂಡಿಸಿದ್ದಾರೆ.
ರೈತರು ಯಾವತ್ತು ಹೇಡಿ ರೀತಿ ವರ್ತನೆ ಮಾಡಲ್ಲ. ರೈತ ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ ಪ್ರಾಣಿಗಳ ಹಾವಳಿ ಎಲ್ಲವನ್ನು ಎದುರಿಸಿ ಅವನು ಬೆಳೆ ಬೆಳೆಯೋದು ಅದಕ್ಕೆ ಹೆದರಲ್ಲ ಈ ರೈತ.ಆತ ಒಂದು ಬೆಳೆ ಬೆಳೆಯಲು ಸಾಕಷ್ಟು ಕಷ್ಟಪಟ್ಟಿರುತ್ತಾನೆ. ಬ್ಯಾಂಕ್ ನಿಂದ ಸಾಲ ಮಾಡಿ ಒಂದು ಫಸಲು ತೆಗೆಯೋ ದೇಶದ ಬೆನ್ನೆಲುಬು ರೈತರಿಗೆ ಈ ರೀತಿ ಹೇಳೋದು ಕೃಷಿ ಸಚಿವರಿಗೆ ಅವರ ಸ್ಥಾನಕ್ಕೆ ಸಮಂಜಸವಲ್ಲ. ಬೆಳೆಯೋ ಬೆಳೆಗೆ ಬೆಲೆ ಸಿಗದೆ ಕಂಗಾಲಾಗಿರ್ತಾರೆ.
ರೈತರ ಬಗ್ಗೆ ಹಗುರವಾಗಿ ಮಾತನಾಡೋದನ್ನ ಬಿಟ್ಟು ತಮ್ಮ ಹೇಳಿಕೆಯನ್ನ ವಾಪಸ್ ತೆಗೆದುಕೊಳ್ಳಬೇಕು ಬಹಿರಂಗವಾಗಿ ಕ್ಷಮೆ ಕೇಳ್ಬೇಕು ಅಂತಾ ರೈತರು ಒತ್ತಾಯಿಸಿದ್ರು.ಇನ್ನೂ ರೈತರ ಅಸಮಾಧಾನವನ್ನು ತಿಳಿದ ಸಚಿವ ಆನಂದ್ ಸಿಂಗ್ ರೈತರೊಂದಿಗೆ ಮಾತನಾಡಿದ್ರು.
ಇನ್ನೂ ಇತ್ತ ಕೃಷಿ ಸಚಿವರು ರೈತರ ಬಗ್ಗೆ ಹೀಗೆ ಮಾತನಾಡಿರುವ ವಿಷಯ ತಿಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಿಸಿ ಪಾಟೀಲರನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳಲ್ಲ ಬಿಸಿ ಪಾಟೀಲ ಅವರೇ ಹಣ ಅಧಿಕಾರಕ್ಕಾಗಿ ಆತ್ಮವನ್ನು ಮಾರಿಕೊಂಡವರು ಹೇಡಿಗಳು ಅನ್ನ ಕೊಡುವ ರೈತರನ್ನು ನಿಂದಿಸಿ ಉಂಡ ಮನೆಗೆ ದ್ರೋಹ ಬಗೆಯುವ ನಿಮಗೆ ಒಂದು ನಿಮಿಷವೂ ಅಧಿಕಾರದಲ್ಲಿರುವ ನೈತಿಕತೆ ಇಲ್ಲ ಎಂದಿದ್ದಾರೆ.
ಒಟ್ನಲ್ಲಿ , ರೈತರ ವಿಷ್ಯದಲ್ಲಿ ಕೃಷಿ ಸಚಿವರು ಮತ್ತೊಮ್ಮೆ ಹಗುರವಾಗಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲರ ವಿರುದ್ಧ ಅನ್ನದಾತರು ತಿರುಗಿ ಬಿದ್ದಿದ್ದಾರೆ. ಇನ್ನಾದ್ರೂ ಕೃಷಿ ಸಚಿವ್ರು ರೈತರ ವಿಷ್ಯದಲ್ಲಿ ಗೌರವಯುತವಾಗಿ ವರ್ತಿಸಬೇಕು ಅನ್ನೋ ಮಾತು ಇದೀಗ ಎಲ್ಲೆಡೆಯಿಂದ ಕೇಳಿ ಬರುತ್ತಿದೆ.