ಧಾರವಾಡ –
ರಾಷ್ಟ್ರೀಯ ರೈತ ದಿನಾಚರಣೆಯನ್ನು ಧಾರವಾಡದಲ್ಲೂ ಆಚರಣೆ ಮಾಡಲಾಯಿತು. ರೈತಮೋರ್ಚಾ,ಹಾಗೂ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಈ ಒಂದು ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಯಿತು.ರಾಜ್ಯ ರೈತಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಅರವಿಂದ ಏಗನಗೌಡರ ಹಾಗೂ ಮಹಿಳಾಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಸೀಮಾ ಮಸೂತಿ ಇವರ ಸುಮ್ಮುಖದಲ್ಲಿ ಈ ಒಂದು ಕಾರ್ಯಕ್ರಮ ನಡೆಯಿತು.

ರೈತಮಹಿಳೆಯರು ಹಾಗೂ ಹಿರಿಯ ರೈತರಿಗೆ ಸನ್ಮಾನಿಸಲಾಯಿತು. ಇದೇ ವೇಳೆ ಅರವಿಂದ ಏಗನಗೌಡರ ಮಾತನಾಡಿ ದೇಶದ ಐದನೇಯ ಅಂತರಾಷ್ಟ್ರೀಯ ದಿನಾಚರಣೆಯನ್ನು ಹಿರಿಯರು,ಮಾಜಿ ಪ್ರಧಾನಿಗಳಾದ ಶ್ರೀ ಚೌಧರಿ ಚರಣಸಿಂಗರವರ,ಹುಟ್ಟು ಹಬ್ಬದ ಅಂಗವಾಗಿ ಆಚರಿಸಲಾಗುತ್ತಿದ್ದು,ರೈತಪರ,ರೈತರ ಹಿತದೃಷ್ಠಿಯಿಂದ ,ಜಮೀನ್ದಾರಿಪದ್ದತಿ ಹೋಗಲಾಡಿಸುವ ನಿಟ್ಟಿನಲ್ಲಿ ಹಾಗೂ ದಳ್ಳಾಳಿಗಳ ಕಾಟ ತಪ್ಪಿಸಿ ರೈತರನ್ನು ಉಳಿಸಿಬೆಳೆಸಬೇಕೆಂಬ ಸಂಕಲ್ಪ ಹೊಂದಲಾಗಿದೆ ಎಂದರು.
ಇನ್ನೂ ಎಪಿಎಮ್ ಸಿ ಕಾಯ್ದೆಯನ್ನ ಜಾರಿಗೆ ತಂದು,ಊಳುವವನೆ ಒಡೆಯ ಎಂಬ ಕಾನೂನು ಚಾಲನೆಗೊಳಿಸಿ,ರೈತರ ಬಾಳು ಹಸನು ಮಾಡಿದ ಮಹನೀಯರು ಶ್ರೀ ಚರಣಸಿಂಗರವರು,ಹಸಿರು ಕ್ರಾಂತಿಯ ಕಾಲದಲ್ಲಿಯೇ ಇಂತಹ ದಿಟ್ಟ ನಿರ್ಧಾರ ಕೈಗೊಂಡ ಮಹಾನರ ಹುಟ್ಟುಹಬ್ಬವನ್ನು ರಾಷ್ಟ್ರೀಯ ರೈತ ದಿನಾಚರಣೆಯಾಗಿ ಆಚರಿಸುವಂತಾಗಿದ್ದು ನಮ್ಮ ಪುಣ್ಯ ಎಂದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕಿ ಸೀಮಾ ಮಸೂತಿಯವರು ಮಾತನಾಡಿ ರೈತಪರ ಕೇಂದ್ರ,ಹಾಗೂ ರಾಜ್ಯ ಸರ್ಕಾರಗಳಿಗೆ ಕಳಂಕ ತರುವ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವ ವಿರೋದಿಗಳು,ನರೇಂದ್ರ ಮೋದೀಜಿಯವರ ವಿರುದ್ದ ಷಡ್ಯಂತ್ರ ಮಾಡುತ್ತಿದ್ದು ರೈತರು ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ,ರಾಜ್ಯ ನಾಯಕರುಗಳಾದ ಅರವಿಂದ ಏಗನಗೌಡರ,ಸೀಮಾ ಮಸೂತಿ, ಮಂಡಳ ಅಧ್ಯಕ್ಷರಾದ ಸುನೀಲ ಮೋರೆ, ರೈತಮೋರ್ಚಾ ಅಧ್ಯಕ್ಷ ಜಗು ಚಿಕ್ಕಮಠ,ಮಹಿಳಾ ಮೋರ್ಚಾ ಅಧ್ಯಕ್ಷರಾದ ರಾಜೇಶ್ವರಿ ಅಳಗವಾಡಿ,ರೇಣುಕಾ ಕೋಳೇಕರ,ಪುಷ್ಪಾ ನವಲಗುಂದ,ಮಹಾದೇವಿ ಕೌದಿ,ಲಕ್ಷ್ಮಿ ಕೇರಿಮಠ,ನಾಗರಾಜ ಗಾಣಿಗೇರ,ಶ್ರೀನಿವಾಸ ಕೋಟ್ಯಾಣ,ಹರೀಶ ಬಿಜಾಪೂರ,ಶ್ರೀಧರ ಚಂದರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.