ಧಾರವಾಡ –
ಇನ್ನೇನು ಶಾಲೆಗಳು ಆರಂಭವಾಗುವ ಆಶಯ ದೊಂದಿಗೆ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾ ಧಿಕಾರಿಗಳಾದ ಉಮೇಶ ಬಮ್ಮಕ್ಕನವರ ಇವರ ಮಾರ್ಗದರ್ಶನದಲ್ಲಿ ಧಾರವಾಡ ತಾಲ್ಲೂಕಿನಾದ್ಯಂತ ನಾಲ್ಕು ಐದು ಜನರ ತಂಡಗಳನ್ನು ಮಾಡಿಕೊಂಡು ಎಲ್ಲಾ ಶಾಲೆಗಳಿಗೆ ಬೇಟಿನೀಡಿ ಪರ್ಯಾಯ ಶಿಕ್ಷಣ ಕಲಿಕೆ ಸೇರಿದಂತೆ, ಮಕ್ಕಳ ಕಲಿಕೆಗೆ ಸಂಬಂಧಿಸಿ ದಂತೆ ಮಕ್ಕಳ ಪಾಲಕರ ಬಳಿ ಇರುವ ವ್ಯವಸ್ಥೆ ಹಾಗೂ ಶಿಕ್ಷಕರು ಮಾಡಿಕೊಂಡ ಪರ್ಯಾಯ ವ್ಯವಸ್ಥೆ ಸೇರಿದಂತೆ,

ವಾರ್ಷಿಕ ಅಂದಾಜು, ಪೂರಕ ಪರೀಕ್ಷೆ ಮತ್ತು ಮಕ್ಕಳಿಗೆ ಕಲಿಕೆಯ ನಿತ್ಯ ಸಂಪರ್ಕ ಇರುವ ಹಾಗೆ ಮಕ್ಕಳ ತರಗತಿವಾರು ವಾಟಸಪ್ ಗ್ರುಪ್ ಗಳನ್ನು ರಚಿಸಿಕೊಂಡು, ಆ ಗ್ರುಪ್ ಗಳ ಮೂಲಕ ಮಕ್ಕಳಿಗೆ ಹೇಗೆ ಕಾರ್ಡಗಳ ಮೂಲಕ ಕಲಿಕೆಯ ಸಂಪರ್ಕ ಸಾಧಿಸಬಹುದು ಎಂಬ ಬಗ್ಗೆ ಶಿಕ್ಷಕರಿಗೆ ಮಾರ್ಗ ದರ್ಶನ ಮಾಡುವುದೇ ಮಿಂಚಿನ ಸಂಚಾರದ ಮೂಲ ಉದ್ದೇಶ ಎಂದು ಧಾರವಾಡ ತಾಲ್ಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್ ಟಿ ಅರಸನಾಳ ತಿಳಿಸಿದರು

ಇವರೊಂದಿಗೆ ಸಂಪನ್ಮೂಲ ಶಿಕ್ಷಕರಾದ ಶ್ರೀಮತಿ ಕರಿಗಾರ, ಎ ಎ ಚಕೋಲಿ,ಎಂ ಡಿ ಹೊಸಮನಿ ಹಾಜರಿದ್ದು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಹೆಬ್ಬಳ್ಳಿಯ ಜಿ ಬಿ ಶೆಟ್ಟರ್ ತಿಳಿಸಿದರು.ಇದೇ ಸಂದರ್ಭದಲ್ಲಿ ಶಿಕ್ಷಕ ಎಸ್ ಎ ಜಾಧವ ಹಸೀನಾ ಸಮುದ್ರಿ, ಶಿವಬಸವ ಜೋತಿ, ಭಾರತಿ ಶಿಂದೆ, ಅಕ್ಬರಲಿ ಸೋಲಾಪುರ, ಸಾವಿತ್ರಿ ಜಾಲಿಮರದ, ನಾಗರತ್ನ ಅಂಚಟಗೇರಿ, ಅನ್ನಪೂರ್ಣೇಶ್ವರಿ ಹಳ್ಳಿಕೇರಿಮಠ,ಅನೀಸಾ ಕೊಲ್ಹಾಪುರ,ವಿ ವಿ ಕಟ್ಟಿ ರೇಶ್ಮಾ ನಧಾಪ,ಎನ್ ಎನ್ ಹಾಲಿಗೇರಿ ಎಲ್ ಬಿ ಕೊಂಗವಾಡ ಸುಶ್ಮಾ ನರ್ಚಿ, ಅವರು ಈ ಕರೋನ ಸಾಂಕ್ರಾಮಿಕ ರೋಗ ಸಂಪೂರ್ಣ ಹೋಗಬೇಕು, ಮುಖಾಮುಖಿ ಕಲಿಕೆ ಆರಂಭವಾಗಬೇಕು ಎಂದು ಸದಾಶಯ ವ್ಯಕ್ತಪಡಿಸಿ ದರು.
