ಹೈದರಾಬಾದ್ –
ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮೇಲೆ ದೂರು ದಾಖಲಾಗಿದೆ.
ಹೌದು ಇವರ ವಿರುದ್ಧ ಹೈದರಾಬಾದ್ ನಲ್ಲಿ ಪ್ರಕರಣ ದಾಖಲಾಗಿದೆ.ತೇಜಸ್ವಿ ಅವರು ಉಸ್ಮೇನಿಯಾ ವಿಶ್ವವಿದ್ಯಾಲಯದ ಮೇಲೆ ಅತಿಕ್ರಮಣ ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಿಜೆಪಿ ಪರ ಪ್ರಚಾರಕ್ಕೆ ಹೈದರಾಬಾದ್ ತೆರಳಿದ್ದ ತೇಜಸ್ವಿ ಸೂರ್ಯ ಅವರು ತಮ್ಮ ಪಕ್ಷದ ಬೆಂಬಲಿಗರೊಂದಿಗೆ ಉಸ್ಮೇನಿಯಾ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಆದರೆ ಪ್ರವೇಶದ್ವಾರದಲ್ಲಿ ಬೇಲಿ ಹಾಕಿ ಸಂಸದರನ್ನು ಮತ್ತು ಕಾರ್ಯಕರ್ತರನ್ನು ಮುಖಂಡರನ್ನು ತಡೆಯಲಾಗಿತ್ತು. ಹೀಗಾಗಿ, ಬೇಲಿಯನ್ನು ತೆರವುಗೊಳಿಸಿ ವಿವಿ ಪ್ರವೇಶಿಸಿದ್ದರು.
ಇದರಿಂದ ತಮ್ಮ ಅನುಮತಿ ಇಲ್ಲದೆಯೆ ಬೇಲಿ ತೆರವುಗೊಳಿಸಿ ವಿವಿಗೆ ಪ್ರವೇಶ ಮಾಡಿದ್ದಾರೆಂದು ವಿಶ್ವ ವಿದ್ಯಾಲಯ ಆರೋಪಿಸಿ ಇವರ ಮೇಲೆ ದೂರು ನೀಡಿದೆ. ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.