ಪುಣೆ –
ಪಾಠ ಹೇಳುವ ಶಿಕ್ಷಕಿಯೊಬ್ಬರ ಖಾಸಗಿ ವಿಡಿಯೋವನ್ನು ವಿದ್ಯಾರ್ಥಿಯೊರ್ವ ಮೊಬೈಲ್ ನಲ್ಲಿ ಸೆರೆ ಹಿಡಿದ ಘಟನೆ ಪುಣೆಯ ಅಲಂಕಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ವಿದ್ಯಾರ್ಥಿಗೆ ಪಾಠ ಹೇಳಲು ಮನೆಗೆ ಶಿಕ್ಷಕಿಯೊಬ್ಬರು ಬಂದಿದ್ದರು ಶಿಕ್ಷಕಿ ಬಾತ್ ರೂಂ ಗೆ ಹೋಗಿದ್ದ ವೇಳೆ ಆ ದೃಶ್ಯವನ್ನು ಅಪ್ರಾಪ್ತ ವಿದ್ಯಾರ್ಥಿ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.16ರ ಹರೆಯದ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್ ಅನ್ನು ವಾಶ್ ರೂಂನಲ್ಲಿ ಮರೆ ಮಾಡಿಟ್ಟಿದ್ದಾನೆ.
ಇದರ ಅರಿವಿಲ್ಲದ ಶಿಕ್ಷಕಿ ಬಾತ್ ರೂಂ ಬಳಕೆ ಮಾಡಿ ಹೊರ ಬಂದಿದ್ದಾರೆ.ಆದರೆ ಶಿಕ್ಷಕಿಯ ಎಲ್ಲಾ ಖಾಸಗಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಮನೆಯಲ್ಲಿ ಶಿಕ್ಷಕಿ ವಿದ್ಯಾ ರ್ಥಿಗೆ ಪಾಠ ಮಾಡುವ ವೇಳೆಯೂ ಅಪ್ರಾಪ್ತ ವಿದ್ಯಾರ್ಥಿ ತನ್ನ ಮೊಬೈಲ್ನಲ್ಲಿ ಖಾಸಗಿಯ ಎಲ್ಲಾ ವಿಡಿಯೋವನ್ನು ಸಹ ಸೆರೆ ಹಿಡಿದಿದ್ದು. ಈ ಸಂಬಂಧ 56 ವರ್ಷದ ಸಂತ್ರಸ್ತ ಶಿಕ್ಷಕಿ ದೂರು ನೀಡಿದ್ದು,ಎಲ್ಲಾ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪುಣೆಯ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿ ವಿರುದ್ಧ ವಿರುದ್ಧ ಪ್ರಕರಣ ದಾಖಲಾ ಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಮಂಜುನಾಥ ಸರ್ವಿ ಸುದ್ದಿ ಸಂತೆ ನ್ಯೂಸ್ ಡೆಸ್ಕ್