ಹುಬ್ಬಳ್ಳಿ –
ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಸಂತೋಷ್ ನಗರದಲ್ಲಿ ಈ ಒಂದು ಘಟನೆ ನಡೆದಿದೆ.ಸಂತೋಷ್ ನಗರದ ಬಸ್ ನಿಲ್ದಾಣದ ಬಳಿ ರೋಹಿತ್ ಗೌಡ ಪಾಟೀಲ್ ಎಂಬುವರು ಹೊಟೇಲ್ ಇಟ್ಟುಕೊಂಡಿದ್ದಾರೆ.

ಕಳೆದ ಹಲವಾರು ದಿನಗಳಿಂದ ಪತ್ನಿಯೊಂದಿಗೆ ಹೊಟೇಲ್ ನಡೆಸಿಕೊಂಡು ಬರುತ್ತಿದ್ದರು. ಇಬ್ಬರು ಮಕ್ಕಳು ಪತ್ನಿ ಯೊಂದಿಗೆ ಹೊಟೇಲ್ ನಡೆಸಿಕೊಂಡು ಬರುತ್ತಿದ್ದ ಇವರು ಆಗೊಮ್ಮೆ ಈಗೊಮ್ಮೆ ಸರಾಯಿ ಕುಡಿಯುತ್ತಿದ್ದರು.ಇದರಿಂದ ಇವರ ಹೆಂಡತಿ ಬೇಸತ್ತಿದ್ದರು. ಈಗಾಗಲೇ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.ಇಂದು ಎಂದಿನಂತೆ ಮತ್ತೆ ಹೊಟೇಲ್ ತೆರೆದಿದ್ದು ಹೆಚ್ಚಿನ ಪ್ರಮಾಣದಲ್ಲಿ ಹೊಟೇಲ್ ಗೆ ಸಾರ್ವಜನಿಕರು ಬಂದಿದ್ದಾರೆ.

ಇದೇ ಸಮಯದಲ್ಲಿ ಹೊಟೇಲ್ ನಲ್ಲಿ ಇರಬೇಕಾಗಿದ್ದ ರೋಹಿತ್ ಗೌಡರು ಪತ್ನಿ ಗೆ ಸ್ವಲ್ಪ ಬೈಕ್ ಕೀ ಕೊಡುವಂತೆ ಕೇಳಿದ್ದಾರೆ.ಬೈಕ್ ಕೀ ಕೊಡಲು ಹಿಂದೆಟು ಹಾಕಿದ್ದಾರೆ. ಇದರಿಂದ ಅಸಮಾಧಾನಗೊಂಡ ಇವರು ಜಗಳ ಮಾಡಿ ಹೊಟೇಲ್ ಹಿಂದೆ ಇದ್ದ ಸಂತೋಷ್ ನಗರ ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೂಡಲೇ ಇದನ್ನು ನೋಡಿದ ಇಬ್ಬರು ಕೆರೆಗೆ ಜಿಗಿದರು ಆದರೂ ರೋಹಿತ್ ಗೌಡರನ್ನು ಉಳಿಸಲು ಸಾಧ್ಯವಾಗಲಿಲ್ಲ .ಕೊನೆಗೂ ಶವವಾಗಿ ಕೆರೆಯಿಂದ ಹೊರತಗೆಯಲಾಯಿತು. ಕ್ಷುಲ್ಲಕ ಕಾರಣಕ್ಕಾಗಿ ಹೀಗೆ ಮಾಡಿಕೊಂಡು ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅನಾಥ ಮಾಡಿ ಬಾರದ ಲೋಕಕ್ಕೆ ಹೋಗಿದ್ದಾರೆ. ಇನ್ನೂ ವಿಷಯ ತಿಳಿದ ಅಶೋಕನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.