ಬೆಂಗಳೂರು –
ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಜೆ ಘೋಷ ಣೆ ಬೆನ್ನಲ್ಲೇ ಸಧ್ಯ ಹೈಸ್ಕೂಲ್ ಶಿಕ್ಷಕರಿಗೂ ಶಿಕ್ಷಣ ಇಲಾಖೆ ಒಂದು ವಾರದ ರಜೆಯನ್ನು ಘೋಷಣೆ ಮಾಡಲಾಗಿದೆ. ಹೌದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಜೆ ನೀಡಿದ ಬೆನ್ನಲ್ಲೇ ಪ್ರೌಢಶಾಲಾ ಶಿಕ್ಷಕರು ಸಾಕ ಷ್ಟು ಪ್ರಮಾಣದಲ್ಲಿ ಅಸಮಾಧಾನಗೊಂಡಿದ್ದರು ಇದರಿಂದಾಗಿ ಎಚ್ಚೆತ್ತುಕೊಂಡ ಇಲಾಖೆ ಕೊನೆಗೂ ಒಂದು ವಾರದ ರಜೆಯನ್ನು ಘೋಷಣೆ ಮಾಡಿದೆ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈಗಾಗಲೇ ಬೇಸಿಗೆ ರಜೆಯನ್ನು ಘೋಷಣೆ ಮಾಡಲಾಗಿದ್ದು ಇದರ ಬೆನ್ನಲ್ಲೇ ಇಂದು ಹೈಸ್ಕೂಲ್ ಶಿಕ್ಷಕರಿಗೂ ಕೂಡಾ ಒಂದು ವಾರದ ರಜೆಯನ್ನು ಘೋಷಣೆ ಮಾಡಲಾ ಗಿದೆ

ಕರೋನ ಆರ್ಭಟ ಹಿನ್ನಲೆಯಲ್ಲಿ ಸಧ್ಯ ಅಸಮಾಧಾ ನಗೊಂಡ ಪ್ರೌಢಶಾಲಾ ಶಿಕ್ಷಕರಿಗೂ ಕೂಡಾ CCE ಕಾರ್ಯವನ್ನು 26 ರೊಳಗೆ ಪೂರ್ಣಗೊಳಿಸಿ 27 ರಿಂದ 1-10 ತರಗತಿವರೆಗೆ (ಶಿಕ್ಷಕರಿಗೂ ಸಹ) ಶಾಲೆಗೆ ರಜೆ ಘೋಷಣೆ ಮಾಡಿ ಶಿಕ್ಷ ಇಲಾಖೆಯ ಆದೇಶವನ್ನು ಹೊರಡಿಸಿದೆ

ಸಧ್ಯ ಬುಗಿಲೆದ್ದ ಆಕ್ರೋಶದಿಂದಾಗಿ ತಾತ್ಕಾಲಿಕವಾಗಿ ಒಂದು ವಾರದ ಕರೋನ ರಜೆಯನ್ನು ನೀಡಲಾಗಿದೆ ಆದರೆ ಬೇಸಿಗೆ ರಜೆ ಕಥೆ ಏನಾಯಿತು ಎಂಬ ಶಿಕ್ಷಕರ ಪ್ರಶ್ನೆಗೆ ಸಧ್ಯ ಇಲಾಖೆ ತಾತ್ಕಾಲಿಕ ರಜೆ ನೀಡಿ ಶಮನ ಮಾಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು