ಧಾರವಾಡ –
ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಕೊಡ ಮಾಡುವ ಆರ್ಥಿಕ ನೆರವನ್ನು ಸಮಾಜದ ವಿದ್ಯಾರ್ಥಿ ಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಸಲಹೆ ಗಾರ ಸಂಭಾಜಿ ಗೋಡ್ಸೆ ಹೇಳಿದರು.ನಗರದ ಗೋಡ್ಸೆ ಪ್ಲಾಟ್‌ನಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ಎಂಜನೀಯಂರಿಂಗ್ ಓದುತ್ತಿರುವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ ಮನೋಜ ಬಾಗೇವಾಡಿಗೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಕೊಡ ಮಾಡಿದ ಚೆಕ್‌ನ್ನು ವಿತರಿಸಿ ಅವರು ಮಾತನಾ ಡಿದರು.
ಸಮಜಮುಖಿ ಚಿಂತನೆಯ ಹಿನ್ನೆಲೆಯಲ್ಲಿ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಕಾರ್ಯೋನ್ಮುಖ ವಾಗಿದ್ದು ಸಮಾಜದ ಜನರ ಅದರಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ನೆರವು ನೀಡುತ್ತಿದೆ.ಆದ್ದರಿಂದ ಅರ್ಹರು ಈ ನೆರವಿನ ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.ಈ ಒಂದು ಕಾರ್ಯಕ್ರಮ ದಲ್ಲಿ ಸಮಾಜದ ಪ್ರಮುಖರಾದ ಅರ್ಜುನ ಕದಂ,ದತ್ತಾ ಮೋಟೆ,ಮಲ್ಲೇಶಿ ಶಿಂಧೆ, ಸುನೀಲ ಮೋರೆ, ಗಂಗಾಧರ ಡಾಂಗೆ, ರವಿ ಚವ್ಹಾಣ, ರಾಜು ಕಾಳೆ, ವಿಠ್ಠಲ ಚವ್ಹಾಣ, ಸುರೇಶ ಸವ್ವಾಸಿ, ನಾಗರಾಜ ಆರೇರ ಇನ್ನಿತರರು ಇದ್ದರು.