ಮನೆಗೆ ಬೆಂಕಿ ನಾಲ್ಕು ಜಾನುವಾರಗಳು ಸಾವು – ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬೆಂಕಿ ಇಟ್ಟ ದುಷ್ಕರ್ಮಿಗಳು

Suddi Sante Desk

ಧಾರವಾಡ –

ದುಷ್ಕರ್ಮಿಗಳಿಂದ ಮನೆಗೆ ಬೆಂಕಿ ಹಚ್ಚಿ ನಾಲ್ಕು ಜಾನುವಾರಗಳು ಸಾವಿಗೀಡಾಗಿ ಅಪಾರ ಪ್ರಮಾಣದ ಧಾನ್ಯ ಗಳು ಬೆಂಕಿಗೆ ಆಹುತಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ತಾಲ್ಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಈ ಒಂದು ದುರಂತ ನಡೆದಿದೆ. ಸುಮಾರು 70 ಕ್ವಿಂಟಾಲ್ ಹತ್ತಿ, ಗೋಧಿ, ಜೋಳ ಬೆಂಕಿಗೆ ಭಸ್ಮವಾಗಿವೆ.ಕರಡಿಗುಡ್ಡ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಈ ಒಂದು ಅವಘಡ ನಡೆದಿದೆ. ಚನ್ನಬಸಪ್ಪ ಹನಿ ಎಂಬುವವರಿಗೆ ಸೇರಿದ ಮನೆಗೆ ಬೆಂಕಿ ಹಚ್ಚಲಾಗಿದೆ.ಊರ ಹೊರಗಿನ ಜಮೀನಿನಲ್ಲಿದ್ದ ಮನೆಗೆ ಬೆಂಕಿ ಹಚ್ಚಲಾಗಿದೆ.

ಊರೊಳಗಿನ‌ ಮನೆಗೆ ಬಂದಾಗ ಬೆಂಕಿ ಹಚ್ಚಿದ್ದಾರೆ ದುಷ್ಕರ್ಮಿಗಳು ಮನೆಯಲ್ಲಿ ಯಾರೂ ಇಲ್ಲದಾಗ ಬೆಂಕಿ ಹೆಚ್ಚಿರುವ ದುಷ್ಕರ್ಮಿಗಳ ಕೃತ್ಯಕ್ಕೆ ಗ್ರಾಮಸ್ಥರು ಮರಗುತ್ತಿದ್ದಾರೆ.

ಇನ್ನೂ ವಿಷಯ ತಿಳಿದ ಗ್ರಾಮೀಣ ಪೊಲೀಸರು ಪರಿಶೀಲನೆ ಮಾಡಿದರು.

ಒಟ್ಟಾರೆ ಮನೆಗೆ ಬೆಂಕಿ ಇಟ್ಟವರು ಯಾರು ಯಾತಕ್ಕಾಗಿ ಹೀಗೆ ಮಾಡಿದರು ಚುನಾವಣಾ ವೈಷಮ್ಯಕ್ಕಾಗಿ ಹೀಗೆ ಮಾಡಿದರಾ ಏನು ಎಂಬ ಕುರಿತು ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.