ಧಾರವಾಡ –
ಪೊಲೀಸರ ಬ್ಯಾರಿಕೇಡ್ ಗೆ ಕಾರೊಂದು ಡಿಕ್ಕಿಯಾಗಿ ಮತ್ತೊಂದು ಬ್ಯಾರಿಕೇಡ್ ಗೆ ಡಿಕ್ಕಿಹೊಡೆದು ಏರ್ರಾ ಬಿರ್ರಿಯಾಗಿ ಹೋಗುತ್ತಿದ್ದ ಕಾರನ್ನು ಧಾರವಾಡದಲ್ಲಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೋರಾಗಿ ಬಂದ ಕಾರು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಅಳವಡಿಸಿದ್ದ ಬ್ಯಾರಿಕೇಡ್ ಗೆ ಮೊದಲು ಡಿಕ್ಕಿಯಾಗಿದೆ.
ನಂತರ ಮತ್ತೊಂದು ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಏನು ಆಗಿಲ್ಲ ಎಂದುಕೊಂಡು ಹೊರಟಿದ್ದ ಕಾರೊಂದನ್ನು ಧಾರವಾಡ ಸಂಚಾರಿ ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.ರಸ್ತೆಯಲ್ಲಿ ಎರ್ರಾ ಬಿರ್ರಿಯಾಗಿ ಚಾಲನೆ ಮಾಡಿಕೊಂಡು ಯುವಕರು ಹೊರಟಿದ್ದರು.
ಇದನ್ನು ನೋಡಿದ ಧಾರವಾಡದ ಕೃಷಿ ಮಹಾವಿದ್ಯಾಲಯ ಮುಂದೆ ನಿಂತುಕೊಂಡಿದ್ದ ಧಾರವಾಡದ ಸಂಚಾರಿ ಪೊಲೀಸರು ಕೊನೆಗೂ ಕಾರನ್ನು ಬೆನ್ನಟ್ಟಿ ನಿಲ್ಲಿಸಿದರು. ನಂತರ ವಿಚಾರಣೆ ನಡೆಸಿ ಕಾರನ್ನು ವಶಕ್ಕೆ ತೆಗೆದುಕೊಂಡರು. ಸಂಚಾರಿ ಪೊಲೀಸರು ಇರದಿದ್ದರೇ ಕಾರಿನಲ್ಲಿದ್ದ ನಾಲ್ಕು ಜನ ಯುವಕರು ಜೀವಂತವಾಗಿರುತ್ತಿರಲಿಲ್ಲ ಇವರ ಕರ್ತವ್ಯ ಮತ್ತು ಸಮಯ ಪ್ರಜ್ಞೆಯಿಂದ ನಾಲ್ಕು ಯುವಕರ ಪ್ರಾಣವನ್ನು ಸಂಚಾರಿ ಪೊಲೀಸರು ಉಳಿಸಿದ್ದಾರೆ. ಪಾರ್ಟಿ ಮುಗಿಸಿಕೊಂಡು ಮನೆಯತ್ತ ನಾಲ್ಕು ಜನ ಯುವಕರು ಹೊರಟಿದ್ದರು.
ಇವರೆಲ್ಲರೂ ಧಾರವಾಡದ ಸೌದಾಘರ ಮಸೀದಿ ಬಳಿಯ ನಿವಾಸಿಗಳಾಗಿದ್ದಾರೆ.ASI Y D ಮೇದಾರ,ಪೊಲೀಸ್ ಸಿಬ್ಬಂದಿ ಗಳಾದ ಮಂಜು ಗದ್ದಿಕೇರಿ,ಲಿಂಗರಾಜ ನಾಯಕ,ನಾಲಬಂಧ,ಮಂಜು ಕ್ಯಾತಪ್ಪನವರ ಕರ್ತವ್ಯದ ಮೇಲೆ ಇದ್ದರು ಇದರಿಂದಲೇ ನಾಲ್ಕು ಯುವಕರ ಜೀವ ಉಳಿದಿದ್ದು ಧಾರವಾಡ ಸಂಚಾರಿ ಪೊಲೀಸರಿಗೆ ಹ್ಯಾಟ್ಸ್ ಅಪ್ ಹೇಳಲೆಬೇಕು.