ಹುಬ್ಬಳ್ಳಿ –
ಡಿಸೆಂಬರ್ 25 ರಂದು ಹುಬ್ಬಳ್ಳಿಯ ಬಾಕಳೆ ಗಲ್ಲಿಯಲ್ಲಿ ನಡೆದ ರಮೇಶ ಭಾಂಡಗೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.ಐವರು ಆರೋಪಿಗಳನ್ನು ಉಪನಗರ ಪೊಲೀಸರು ಬಂಧನ ಮಾಡಿದ್ದಾರೆ.ಸಿಸಿಟಿವಿ ಫುಟೇಜ್, ಕಾಲ್ನಡಿಗೆ ಆಧರಿಸಿ ಪತ್ತೆ ಹಚ್ಚಿದ ಶಹರ ಠಾಣೆ ಪೊಲೀಸರು.ಕೊಲೆ ಮಾಡಿದ ಆರೋಪಿಗಳಿಗೆ ಎಡೆ ಮೂರಿ ಕಟ್ಟಿದ್ದಾರೆ.
25ಲಕ್ಷ ರೂಪಾಯಿಗೆ ಸುಪಾರಿ ಪಡೆದಿದ್ದ ಆರೋಪಿಗಳು.ರಮೇಶ ಬಾಂಢಗೆ ನನ್ನು ಕೊಲೆ ಮಾಡಿದ್ದಾರೆ. ಸದರಸೋಫಾ ನಿವಾಸಿ ರಫಿಕ ಜವಾರಿ ಹಾಗೂ ಶಿವಾಜಿ ಮಿಶ್ಯಾಳ ಸುಪಾರಿ ನೀಡಿದ್ದರು. ಇಜಾಜ ಅಹ್ಮದ ಬಳಕಾಪುರ ಸುಪಾರಿ ಪಡೆದು ಸಹೋದರರು ಹಾಗೂ ಸ್ನೇಹಿತರೊಂದಿಗೆ ಸೇರಿ ಇಜಾಜ್ ಕೊಲೆ ಮಾಡಿದ್ದರು.
ವಾಸೀಮ ಬಂಕಾಪುರ, ಫಯಾಜ್ ಅಹ್ಮದ ಪಲ್ಲಾನ್, ತೌಶಿಫ್ ನರಗುಂದ ಕೊಲೆಗೆ ಸಾಥ್ ನೀಡಿದ್ದರು.ರಮೇಶ ಭಾಂಡಗೆ ಅವರನ್ನು ಹಾಡ ಹಗಲೇ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಹುಬ್ಬಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಭಾಂಡಗೆ ಕೊಲೆ ಪ್ರಕರಣದಲ್ಲಿ ಕೊನೆಗೂ ಪೊಲೀಸರು ಆರೋಪಿಗಳಿಗೆ ಎಡೆಮೂರಿ ಕಟ್ಟಿದ್ದಾರೆ.
ರಮೇಶ್ ಭಾಂಡಗೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು ಇಜಾಜ್‌ಅಹ್ಮದ್ ಬಂಕಾಪೂರ್.ಶಹರ ಠಾಣೆ ಪೊಲೀಸರಿಗೆ ಶರಣಾಗಿದ್ದ ಇಜಾಜ್‌ಅಹ್ಮದ್ ಬಂಕಾಪೂರ್ ನನ್ನು ವಿಚಾರಣೆ ವೇಳೆ ಸುಪಾರಿ ಪಡೆದಿರುವ ವಿಚಾರ ಬಾಯ್ಬಿಟ್ಟಿದ್ದ ಇಜಾಜ್‌ಅಹ್ಮದ್ ಬಂಕಾಪೂರ್. ಗಬ್ಬೂರು ಬಳಿಯ ಜಾಗೆಯ ವಿಚಾರದಲ್ಲಿ ರಮೇಶ್ ಭಾಂಡಗೆ ಜೊತೆ ಜಗಳಾಡಿಕೊಂಡಿದ್ದ ಐವರು. ಕಾನೂನು ಹೋರಾಟದ ಮೂಲಕ ಜಾಗವನ್ನು ವಶಕ್ಕೆ ಪಡೆಯಲು ಮುಂದಾಗಿದ್ದ ರಮೇಶ್ ಭಾಂಡಗೆ ಇವನನ್ನೆ ಮುಗಿಸಿದರೆ ನಮ್ಮ ವ್ಯಾಜ್ಯ ಸರಿಯಾಗುತ್ತದೆ ಎಂದುಕೊಂಡು ಸುಪಾರಿ ಕೊಡಲಾಗಿತ್ತು ಹೀಗಾಗಿ ಸುಪಾರಿ ಪಡೆದು ಕೊಲೆ ಮಾಡಲಾಗಿತ್ತು.ಪೊಲೀಸ್ ಆಯುಕ್ತರ ಮಾರ್ಗದರ್ಶನ ದಲ್ಲಿ ಶಹರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎಮ್ ಎಸ್ ಪಾಟೀಲ್,B N ಸಾತನ್ನವರ ,ಪಿ ಎಲ್ ಗೋವಿಂದಪ್ಪನವರ ,ಎಮ್ ಎ ಅಯ್ಯನಗೌಡರ ,ಸಿ ಎಸ್ ಚಲವಾದಿ ,ಶ್ರೀನಿವಾಸ, ಕೃಷ್ಣ ಕಟ್ಟಿಮನಿ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು .