ಬೆಂಗಳೂರು –
ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿಂದು ಐದು ಶಿಕ್ಷಕರು ನಿಧನರಾಗಿದ್ದಾರೆ. – ಮೃತರಾದ ನಾಡಿನ ಮೂಲೆ ಮೂಲೆಗಳ ಶಿಕ್ಷಕರ ಮಾಹಿತಿಯನ್ನು ನೋಡೊದಾದರೆ

ಶ್ರೀಮತಿ ದಿಲ್ಯಾದ ಸರ್ಕಾರಿ ಕಿರಿಯ ಉರ್ದು ಪ್ರಾಥ ಮಿಕ ಶಾಲೆ ಬ್ಯಾಹಟ್ಟಿ ನಿಧನರಾಗಿದ್ದಾರೆ.ಕಳೆದ ಮೂರು ನಾಲ್ಕು ದಿನಗಳ ಹಿಂದೆ ಇವರಿಗೆ ಸೋಂಕು ಕಾಣಿಸಿಕೊಂಡು ನಂತರ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ದಿಲ್ಯಾದ್ ಟೀಚರ್ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಬ್ಯಾಹಟ್ಟಿ ಗ್ರಾಮಸ್ಥರು ಶಾಲೆಯ ಶಿಕ್ಷಕರು ಶಾಲಾ ಮಕ್ಕಳು ಸಂತಾಪವನ್ನು ಸೂಚಿಸಿ ನಮನವನ್ನು ಸಲ್ಲಿಸಿದ್ದಾರೆ.

ಇನ್ನೂ ಎನ್ ಜಿ ಪತ್ತಾರ ಚಿತ್ರಕಲಾ ಶಿಕ್ಷಕರು ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ ಸಾರವಾಡ ವಿಜಯ ಪುರ ಇವರು ಕೂಡಾ ಕೋವಿಡ್ ಬಲಿಯಾಗಿದ್ದಾರೆ. ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಇವ ರು ಸೋಂಕು ಕಾಣಿಸಿಕೊಂಡು ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ.ವಿಜಯಪುರದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ಸಾವಿ ಗೀಡಾಗಿದ್ದಾರೆ.ಇವರ ನಿಧನಕ್ಕೆ ಶಾಲೆಯ ಸಮಸ್ತ ಶಿಕ್ಷಕರು ಶಾಲಾ ಮಕ್ಕಳು ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಎಮ್ ಗೊಲ್ಲಹಳ್ಳಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿ ಕ ಶಾಲೆಯ ಮುಖ್ಯ ಶಿಕ್ಷಕರಾದ ಎಮ್ ರವಣಪ್ಪ ಅವರು ಕೂಡಾ ಕರೋನಾದಿಂದಾಗಿ ಸಾವಿಗೀಡಾಗಿ ದ್ದಾರೆ.ಇವರು ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.ಚಿಕಿತ್ಸೆ ಫಲಿಸದೇ ಸಾವಿಗೀಡಾಗಿ ದ್ದಾರೆ.


ವನಿತಾ ಮಂಡ್ಯದ ಅರೇಚಾಕನಹಳ್ಳಿ ಸರ್ಕಾರಿ ಶಾಲೆ ಯಲ್ಲಿ ಕರ್ತವ್ಯವನ್ನು ಮಾಡುತ್ತಿದ್ದ ಇವರಿಗೆಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇವರು ಕೂಡಾ ಮೃತರಾಗಿದ್ದಾರೆ.

ಇನ್ನೂ ರಾಜ್ಯಾಧ್ಯಂತ ಮೃತರಾದ ಶಿಕ್ಷಕ ಬಂಧುಗಳಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಭಾವಪೂ ರ್ಣ ನಮನವನ್ನು ಸಲ್ಲಿಸಿದ್ದಾರೆ.ನಾಗರಾಜ ಕಾಮನ ಹಳ್ಳಿ,ಗುರು ತಿಗಡಿ. ಅಶೋಕ ಸಜ್ಜನ, ಮಲ್ಲಿಕಾರ್ಜು ನ ಉಪ್ಪಿನ, ಕಿರಣ ರಘುಪತಿ, ಪವಾಡೆಪ್ಪ, ಎಂ ಐ ಮುನವಳ್ಳಿ, ಶರಣಬಸವ ಬನ್ನಿಗೋಳ, ಎಸ್ ಎಫ್ ಪಾಟೀಲ, ಎಲ್ ಐ ಲಕ್ಕಮ್ಮನವರ ಪಿ ಎಸ್ ಅಂಕಲಿ ಶರಣು ಪೂಜಾರ, ಸಂಗಮೇಶ ಖನ್ನಿನಾಯ್ಕರ,, ಚಂದ್ರಶೇಖರ್ ಶೆಟ್ರು, ಹನುಮಂತಪ್ಪ ಬೂದಿಹಾಳ, ಎನ್ ಎಂ ಕುಕನೂರ, ಆರ್ ಎಂ ಕಮ್ಮಾರ, ಜಿ ಟಿ ಲಕ್ಷ್ಮೀದೇವಮ್ಮ ಕೆ ಬಿ ಕುರಹಟ್ಟಿ, ಎಂ ವಿ ಕುಸುಮಾ ಜೆ ಟಿ ಮಂಜುಳಾ, ರಾಜಶ್ರೀ ಪ್ರಭಾಕರ, ಆರ್ ನಾರಾ ಯಣಸ್ವಾಮಿ ಚಿಂತಾಮಣಿ, ಬಾಬಾಜಾನ ಮುಲ್ಲಾ, ರಂಜನಾ ಪಂಚಾಳ ಸುವರ್ಣ ನಾಯ್ಕ ಕೆ ನಾಗರಾಜ, ಬಿ ಎಸ್ ಮಂಜುನಾಥ, ಅಕ್ಕಮಹಾದೇವಿ ನೂಲ್ವಿ ಲತಾ ಎಸ್ ಮುಳ್ಳೂರ ಸೇರಿದಂತೆ ಹಲವರು ಅಗಲಿದ ಶಿಕ್ಷಕ ಬಂಧುಗಳಿಗೆ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.