ಉತ್ತರಕಾಂಡ್ –
ಉತ್ತರಕಾಂಡ್ʼನಲ್ಲಿ ಹಿಮಕುಸಿತದ ಹಿನ್ನೆಲೆ ದಿಢೀರ್ ಪ್ರವಾಹ ಉಂಟಾಗಿದೆ. ಹಿಮ ಕುಸಿತದಿಂದ ಧೌಲಿಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಯಲ್ಲಿ ಪ್ರವಾಹ ಉಂಟಾಗಿದೆ.
ಜೋಶಿ ಮಠದಲ್ಲಿರುವ ಧೌಲಿ ಗಂಗಾ ನದಿಯಲ್ಲಿ ಹಿಮ ಬೀಳುತ್ತಿರುವುದರಿಂದ ಅಣೆಕಟ್ಟು ಮುರಿದಿದ್ದು, ಇದರಲ್ಲಿ 150ಕ್ಕೂ ಜನರು ಕಾಣೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಇನ್ನೂ ಋಷಿ ಗಂಗಾ ಯೋಜನೆಯ ಕಾರ್ಮಿಕರು ಸೇರಿ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಸ್ಥಳಕ್ಕೆ ರಕ್ಷಣೆ ಪಡೆಗಳು ಆಗಮಿಸಿದ್ದು, ರಕ್ಷಣಾ ಕಾರ್ಯ ಶುರುವಾಗಿದೆ.
ಈ ನಡುವೆ ಉತ್ತರಕಾಂಡ್ʼನ ಐದು ಜಿಲ್ಲೆಗಳಲ್ಲಿ ಹೈ ಆಲರ್ಟ್ ಘೋಷಣೆ ಮಾಡಲಾಗಿದೆ.ಎಲ್ಲೆಡೆ ರಕ್ಷಣಾ ಕಾರ್ಯ ಜೋರಾಗಿ ನಡೆಯುತ್ತಿದೆ.